ಕಡವೆಗುಂಡಿ : ಜಾಗಕ್ಕೆ ಅಕ್ರಮ ಪ್ರವೇಶ – ಸೋಲಾರ್ ತುಂಡರಿಸಿ ನಷ್ಟ- ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು

0

ನಾಲ್ಕೂರು ಗ್ರಾಮದ ಕಡವೆಗುಂಡಿ ಎಂಬಲ್ಲಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜಾಗಕ್ಕೆ ಅಳವಡಿಸಿದ ಸೋಲಾರ್ ಕಂಬ ಸೋಲಾರ್ ತಂತಿ ಹಾಗೂ ಆಂಗ್ಯುಲರ್ ತಂತಿಯನ್ನು ತುಂಡರಿಸಿ ನಷ್ಟವುಂಟು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನುದೇವ್ ಪರಮಲೆ ಎಂಬವರು ಸುಬ್ರಹ್ಮಣ್ಯ ಪೋಲೀಸರಿಗೆ ದೂರು ನೀಡಿದ್ದಾರೆ.


ಸೆ.೨೦ರಂದು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಿಸಿರುವ ಮನುದೇವ್ ಪರಮಲೆಯವರು ನಾಲ್ಕೂರು ಗ್ರಾಮದ ಕಡವೆಗುಂಡಿ ಎಂಬಲ್ಲಿ, ಸುಧಾ ಪಿ.ಆರ್ ಎಂಬವರ ಸುಮಾರು ೦೪.೦೦ ಎಕ್ರೆ ಜಾಗ ಇದ್ದು ಸುಧಾರವರು ಅಮೇರಿಕಾ ದೇಶದಲ್ಲಿ ವಾಸವಾಗಿದ್ದು ಅವರ ಜಾಗವನ್ನು ಜಿಪಿಎ ಮೂಲಕ ನಾನು ನೋಡಿಕೊಂಡಿದ್ದು ಈ ಜಾಗದಲ್ಲಿ, ಅಡಿಕೆ ತೋಟಿ ಇದೆ. ಈ ಜಾಗದಲ್ಲಿ ಈ ಮೊದಲು ಕಳ್ಳತನವಾಗಿದ್ದು ನಂತರ ಜಾಗಕ್ಕೆ ತೋಟದ ಸುತ್ತ ಸೋಲಾರ್ ಸಿ.ಸಿ.ಟಿ.ವಿ.ಯನ್ನು ಅಳವಡಿಸಿರುತ್ತೇವೆ. ಸೆ.೨೦ರಂದು ನಾನು ಜಾಗಕ್ಕೆ ಬಂದು ನೋಡಿದಾಗ ಯಾರೋ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ತೋಟದ ಸುತ್ತ ಅಳವಡಿಸಿದ ಸೋಲಾರ್ ಕಂಬ, ಸೋಲಾರ್ ತಂತಿ ಹಾಗೂ ಆಂಗ್ಯುಲರ್ ತಂತಿಯನ್ನು ತುಂಡರಿಸಿ ನಷ್ಟವುಂಟು ಮಾಡಿರುವುದು ಕಂಡು ಬಂದಿದೆ. ನಾನು ಮಂಗಳೂರಿನಲ್ಲಿ ಕಂಟ್ರಾಕ್ಟರ್ ಕೆಲಸ ಮಾಡಿಕೊಂಡಿದ್ದು ಸೆ.೨೦ ರಂದು ಬಂದು ನೋಡಿದ್ದು, ಸೆ.೧೭ ರಂದು ಜಾಗಕ್ಕೆ ತೋಟದ ಸುತ್ತ ಅಳವಡಿಸಿದ ಸಿ.ಸಿ.ಟಿವಿಯನ್ನು ಪರಿಶೀಲಿಸಲಾಗಿ ನೆರೆಯ ಕಡವೆ ಗುಂಡಿ ವಾಸಿ ರಕ್ಷಿತ್ ಆರ್.ಕೆ ಎಂಬಾತನು, ನಮ್ಮ ಸ್ವಾದೀನದಲ್ಲಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿರುವುದು ಕಂಡು ಬಂದಿದ್ದು, ಸೆ.೧೭ರಿಂದ ಸೆ.೨೦ ರ ಮಧದ ಅವಧಿಯಲ್ಲಿ ನಮ್ಮ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜಾಗಕ್ಕೆ ಅಳವಡಿಸಿದ ಸೋಲಾರ್ ಕಂಬ ಸೋಲಾರ್ ತಂತಿ ಹಾಗೂ ಆಂಗ್ಯುಲರ್ ತಂತಿಯನ್ನು ತುಂಡರಿಸಿ ಸುಮಾರು ರೂ ೮,೦೦೦/- ನಷ್ಟವುಂಟು ಮಾಡಿರುವುದಾಗಿದೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.