ಬಂದಡ್ಕದಲ್ಲಿ ಮೊದಲ ಉತ್ಸವ : ಸದಾನಂದ ಮಾವಜಿ
“ಗಡಿಪ್ರದೇಶಗಳಲ್ಲಿ ಅರೆಭಾಷೆ ಬೆಳವಣಿಗೆ ಹಾಗೂ ಅರೆಭಾಷೆ ಮಾತಾನಾಡುವವರ ಭಾಂದವ್ಯ ವೃದ್ಧಿಗಾಗಿ ಅರೆಭಾಷೆ ಮಾತನಾಡುವವರ ಗಡಿ ಭಾಗದಲ್ಲಿ ೬ ಕಡೆ ಅರೆಭಾಷೆ ಗಡಿನಾಡ ಉತ್ಸವ ಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಮೊದಲ ಕಾರ್ಯಕ್ರಮವನ್ನು ಕೇರಳದ ಬಂದಡ್ಕದ ಶ್ರೀ ಸುಬ್ರಹ್ಮಣ್ಯ ದೇವಳದ ಮಯೂರ ಸಭಾಭನದಲ್ಲಿ ಅಕ್ಟೋಬರ್ ೨೭ರಂದು ಗ್ರಾಮ ಗೌಡ ಸಂಘ ಬಂದಡ್ಕ ಇದರ ಸಹಯೋಗದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ
” ಎಂದು ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದ್ದಾರೆ.
ಕಾರ್ಯಕ್ರಮ ನಡೆಸಲು ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
“ಇದಕ್ಕಾಗಿ ಸ್ಥಳೀಯ ಸಮಿತಿಯನ್ನು ಕೂಡಾ ರಚಿಸಲಾಗಿದೆ. ಕಾರ್ಯಕ್ರಮದ ಉಸ್ತುವಾರಿಯನ್ನು ಅಕಾಡೆಮಿ ಸದಸ್ಯರಾದ ಚಂದ್ರಶೇಖರ್ ಪೇರಾಲು ಹಾಗು ಲತಾ ಕುದ್ಪಾಜೆಯವರಿಗೆ ವಹಿಸಲಾಗಿದೆ” ಎಂದವರು ವಿವರ ನೀಡಿದರು.
ಈ ಕಾರ್ಯಕ್ರಮದಲ್ಲಿ ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ್, ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ನಿರ್ದೇಶಕರಾದ ದೊಡ್ಡಣ್ಣ ಬರೆಮೇಲು, ಮಹಿಳಾ ಘಟಕ ಅಧ್ಯಕ್ಷೆ ವಿನುತಾ ಪಾತಿಕಲ್ಲು ಅರೆಭಾಷೆ ಅಕಾಡೆಮಿ ಸದಸ್ಯರಾದ ಚಂದ್ರಶೇಖರ್ ಪೇರಾಲು, ಡಾ. ಎನ್.ಎ. ಜ್ನಾನೇಶ್, ಲತಾ ಕುದ್ಪಾಜೆ. , ಗ್ರಾಮಗೌಡ ಸಮಿತಿ ಅದ್ಯಕ್ಷ ವಿಶ್ವ ಕುಮಾರ್ ಕಟ್ಟಕೋಡಿ, ಪುರುಷೋತ್ತಮ ಬೊಡ್ಡನಕೊಚ್ಚಿ ಇವರು ವೇದಿಕೆ ಯಲ್ಲಿ ಉಪಸ್ತಿತರಿದ್ದರು.
ಕಾರ್ಯಕ್ರಮದಲ್ಲಿ ಗೌಡ ಗ್ರಾಮ ಸಮಿತಿ ನೂತನ ಅಧ್ಯಕ್ಷ ವೆಂಕಟರಮಣ ಕೊಯಿಂಗಾಜೆ , ಕಾರ್ಯದರ್ಶಿ ಚರಣಕುಮಾರ್ ಮಾವಜಿ ಕೋಶಾಧಿಕಾರಿ ಮೋಹನ್ ಇಳಂದಿಲ ಮಹಿಳಾ ಘಟಕ ಅಧ್ಯಕ್ಷೆ ಹಕ್ಷಿತಾ, ಕಾರ್ಯದರ್ಶಿ ಶ್ರೀಮತಿ ರೂಪ ಕೋಶಾಧಿಕಾರಿ ವಿದ್ಯಾಶ್ರೀ ತರುಣ ಘಟಕದ ಪದಾದಿಕಾರಿಗಳಾದ ಗಣೇಶ್ ಪಾಲಾರ್, ಜ್ನಾನೇಶ್ ಸದಸ್ಯರಾದ ಭೋಜಪ್ಪ ಪಾಲಾರ್ , ಮೋನಪ್ಪ ಗೌಡ ಇಳಂದಿಲ, ಗೋಪಾಲಕ್ರಷ್ನ ಮಾವಜಿ ಹೂವಪ್ಪ ಗೌಡ ಕಟ್ಟಕೋಡಿ , ಮೋನಪ್ಪ ಗೌಡ ಮಕ್ಕಟ್ಟಿ, ರವಿಪ್ರಸಾದ್ ಇಳಂದಿಳ , ಮಧುಳಿಕಾ ಮಕ್ಕಟ್ಟಿ ಧರ್ಮಾವತಿ ಪಾಲಾರ್ ಮೂಲೆ ಮತ್ತು ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.