ಐವರ್ನಾಡಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ,ಮಧುಮೇಹ ತಪಾಸಣೆ,ಸಿ.ಪಿ.ಆರ್ ತರಬೇತಿ ಶಿಬಿರ

0

ಬೆಳ್ಳಾರೆ ರೋಟರಿ ಕ್ಲಬ್ ನಿಂದ ಯಶಸ್ವಿ ಕಾರ್ಯಕ್ರಮ – ಎಸ್.ಎನ್.ಮನ್ಮಥ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಐವರ್ನಾಡು ಗ್ರಾಮಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದೆ. ರಕ್ತದಾನ ಶಿಬಿರದಿಂದ ಜನರಿಗೆ ಬಹಳಷ್ಟು ಪ್ರಯೋಜನ ಆಗುತ್ತದೆ.ಶಿಬಿರದಲ್ಲಿ ಯುವಕರು ಸಕ್ರೀಯರಾಗಿ ಭಾಗವಹಿಸುವ ಮುಖಾಂತರ ರೋಟರಿಯ ಯಶಸ್ವಿ ಕಾರ್ಯಕ್ರಮವಾಗುತ್ತದೆ ಎಂದು ಐವರ್ನಾಡು ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಚ ಎಸ್.ಎನ್.ಮನ್ಮಥರವರು ಹೇಳಿದರು.


ಅವರು ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಗ್ರಾಮ ಪಂಚಾಯತ್ ಐವರ್ನಾಡು ,ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಮಿತ್ರವೃಂದ ಬಾಂಜಿಕೋಡಿ, ಗೆಳೆಯರ ಬಳಗ ದೇರಾಜೆ, ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ, ಸ್ಪೋರ್ಟ್ಸ್ ಕ್ಲಬ್ ಮಾಡತ್ತಕಾನ, ಯುವಶಕ್ತಿ ಸಂಘ ಐವರ್ನಾಡು, ವಾಹನ ಚಾಲಕ-ಮಾಲಕರ ಸಂಘ ಐವರ್ನಾಡು, ವರ್ತಕ ಸಂಘ ಐವರ್ನಾಡು ಇವರ ಸಹಭಾಗಿತ್ವದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ, ಮಧುಮೇಹ ತಪಾಸಣೆ, ಹೃದಯ ಸ್ಥಂಭನದ ಸಂದರ್ಭದಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆ ಸಿ.ಪಿ.ಆ‌ರ್. ತರಬೇತಿ ಶಿಬಿರವನ್ನು ಸೆ.29 ರಂದು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತಿದ್ದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ರೈ ಬಜನಿ ವಹಿಸಿದ್ದರು. ವೇದಿಕೆಯಲ್ಲಿ ಕೆವಿಜಿ ಮೆಡಿಕಲ್ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ನ ಡಾ.ದಿನೇಶ್, ರೊ.ಸಹಾಯಕ ಗವರ್ನರ್ ವಿನಯ ಕುಮಾರ್,ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆ ಶ್ರೀಮತಿ ರಮ್ಯ,ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ,ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಐವರ್ನಾಡು ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್, ಯುವಶಕ್ತಿ ಸಂಘದ ಗೌರವಾಧ್ಯಕ್ಷ ದಿನೇಶ್ ಮಡ್ತಿಲ, ಅಧ್ಯಕ್ಷ ನವೀನ್ ಬಾಂಜಿಕೋಡಿ,ಗೆಳೆಯರ ಬಳಗ ದೇರಾಜೆ ಅಧ್ಯಕ್ಷ ಅರುಣ್ ಗುತ್ತಿಗಾರುಮೂಲೆ,ಮಂಜುಶ್ರೀ ಗೆಳೆಯರ ಬಳಗದ ಅಧ್ಯಕ್ಷ ಶಿವಪ್ರಸಾದ್ ಕಟ್ಟತ್ತಾರು, ವಾಹನ ಚಾಲಕ ಮಾಲಕ ಸಂಘದ ಅಧ್ಯಕ್ಷ ಮಹೇಶ ಜಬಳೆ, ಕಾರ್ಯದರ್ಶಿ ಅನಿಲ್ ಕುತ್ಯಾಡಿ,ಮಿತ್ರ ಬಳಗ ಬಾಂಜಿಕೋಡಿ ಅಧ್ಯಕ್ಷ ಮಹಾಬಲ ಗುಂಪಕಲ್ಲು, ವರ್ತಕ ಸಂಘದ ಅಧ್ಯಕ್ಷ ನಿಖಿಲ್ ಮಡ್ತಿಲ ಉಪಸ್ಥಿತರಿದ್ದರು.


ರೊ.ಪ್ರಭಾಕರ ಆಳ್ವ ಕಾರ್ಯಕ್ರಮ ನಿರೂಪಿಸಿ,ಶ್ರೀಮತಿ ದೇವಕಿ ಸಿ.ಜಿ ಪ್ರಾರ್ಥಿಸಿದರು.ರೊ.ಕಾರ್ಯದರ್ಶಿ ಎ.ಕೆ.ಮಣಿಯಾಣಿ ವಂದಿಸಿದರು.
ರೊ.ಸದಸ್ಯರು,ಸಂಘ ಸಂಸ್ಥೆಗಳ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.