ವಿದ್ಯಾಮಾತಾ ಅಕಾಡೆಮಿಯಲ್ಲಿ ಪೋಷಕರ ಸಭೆ, ಆರ್ಮಿ ಮತ್ತು ಎನ್.ಡಿ.ಎ ಆಯ್ಕೆಯಾದವರಿಗೆ ಸನ್ಮಾನ

0

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಸೆ.29ರಂದು ಪೋಷಕರ ಸಭೆ ನಡೆಯಿತು. ಈ ಸಂದರ್ಭದಲ್ಲಿ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ, ಉದ್ಯೋಗ ಕೌಶಲ್ಯತೆ, ದೈಹಿಕ ಸದೃಢತೆ, ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಬಗ್ಗೆ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಅವರು ಪೋಷಕರು ಮತ್ತು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

ಸಾಧಕರಿಗೆ ಸನ್ಮಾನ

2024ನೇ ಸಾಲಿನ ಅಗ್ನಿಪಥ್ ಯೋಜನೆ ಅಡಿಯಲ್ಲಿ ಅಗ್ನಿವೀರರಾಗಿ ಆಯ್ಕೆಯಾದ ಪುತ್ತೂರು ತಾಲೂಕಿನ ಕಾವು ಮಾಣಿಯಡ್ಕ ನಿವಾಸಿ ಚಂದ್ರಶೇಖರ ಮತ್ತು ಗೀತಾ ದಂಪತಿಗಳ ಪುತ್ರ ಪ್ರಸ್ತುತ ವಿವೇಕಾನಂದ ಪದವಿ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಅವಿನ್ ಹಾಗೂ ಅರಿಯಡ್ಕ ಗ್ರಾಮದ ಮಜ್ಜಾರಡ್ಕ ನಿವಾಸಿ ಪದ್ಮನಾಭ ಪೂಜಾರಿ ಮತ್ತು ಯಶೋಧ ದಂಪತಿಗಳ ಪುತ್ರ ಪ್ರಸ್ತುತ ಸಂತ ಫಿಲೋಮಿನಾ ಪದವಿ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ವಿಜೇತ್ ಎಂ ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಎನ್.ಡಿ.ಎ 2 ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂತಿಮ ಹಂತಕ್ಕೆ ಆಯ್ಕೆಯಾಗಿರುವ ಒಳಮೊಗ್ರು ಗ್ರಾಮದ ಕುಂಬ್ರ ಅಶೋಕ್ ಕುಮಾರ್ ಬಡಕೋಡಿ ಮತ್ತು ಅರಿಯಡ್ಕ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸವಿತಾ ಎಸ್ ದಂಪತಿಗಳ ಪುತ್ರಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ತೃಷಾ ಕುಮಾರಿ ಇವರುಗಳನ್ನು ಸನ್ಮಾನಿಸಲಾಯಿತು.

ತೃಷಾ ಕುಮಾರಿಗೆ ವಿದ್ಯಾಮಾತಾ ಅಕಾಡೆಮಿಯ ವತಿಯಿಂದ 10,000 ನಗದನ್ನು ಪ್ರೋತ್ಸಾಹ ಧನವಾಗಿ ನೀಡಲಾಯಿತು.

ಪ್ರಸ್ತುತ ಈ ವರ್ಷದಲ್ಲಿ 90 ವಿದ್ಯಾರ್ಥಿಗಳು ಅಗ್ನಿಪಥ್ ಸೇನಾ ನೇಮಕಾತಿಗೆ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ದ್ವಾರಕಾ ಕನ್ಸ್ಟ್ರಕ್ಷನ್ ಸಹಭಾಗಿತ್ವದಲ್ಲಿ ಈ ವರ್ಷ 50 ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ.


ಈ ಕಾರ್ಯಕ್ರಮದಲ್ಲಿ ವಿದ್ಯಾಮಾತಾ ಅಕಾಡೆಮಿಯ ತರಬೇತಿದಾರರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.