ಪೆರಾಜೆ: ಜ್ಯೋತಿ ವಿದ್ಯಾ ಸಂಘದ ಮಹಾಸಭೆ, ನೂತನ ಸಮಿತಿ ರಚನೆ

0

ಪೆರಾಜೆ ಜ್ಯೋತಿ ವಿದ್ಯಾಸಂಘ ಇದರ ವಾರ್ಷಿಕ ಮಹಾಸಭೆಯು ಜ್ಯೋತಿ ಪ್ರೌಢಶಾಲೆಯಲ್ಲಿ ವಿದ್ಯಾಸಂಘದ ಅಧ್ಯಕ್ಷರಾದ ಎನ್.ಎ. ಜ್ಞಾನೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಸಮಿತಿ ರಚಿಸಿ 2024-25 ರ ಸಾಲಿಗೆ ನೂತನ ಅಧ್ಯಕ್ಷರಾಗಿ ಡಾ|ಎನ್.ಎ ಜ್ಞಾನೇಶ್ ರವರನ್ನು ಪುನರಾಯ್ಕೆ ಮಾಡಲಾಯಿತು. ಸಂಘದ ಕಾರ್ಯದರ್ಶಿಯಾಗಿ ಮುಡುಕಜೆ ಹರಿಶ್ಚಂದ್ರ ಕೋಶಾಧಿಕಾರಿಯಾಗಿ ಲೋಕನಾಥ ಅಮೆಚೂರು ಇವರುಗಳನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರುಗಳಾಗಿ ಪ್ರಸನ್ನ ನಿಡ್ಯಮಲೆ, ಮತ್ತು ಪ್ರವೀಣ ಮಜಿಕೋಡಿಯವರನ್ನು ನೂತನವಾಗಿ ಆಯ್ಕೆ ಮಾಡಲಾಯಿತು .

ಈ ಸಂದರ್ಭದಲ್ಲಿ ಸೀನೋಪ್ಸಿನ್ ಇಂಡಿಯಾ ಲಿಮಿಟೆಡ್ ವ್ಯವಸ್ಥಾಪಕರಾದ ಶಿವಾನಂದ ಕರ್ಲಪ್ಪಾಡಿ ಇವರು ಶಾಲೆಗೆ 10 ಲ್ಯಾಪ್ಟಾಪ್ ನ್ನು ತಮ್ಮ ಕಂಪನಿ ವತಿಯಿಂದ ಉಚಿತವಾಗಿ ನೀಡಿದರು . ಅವರನ್ನು ಈ ಸಂದರ್ಭ ಶಾಲಾ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸ್ಥಳದಾನಿಗಳಾದ ಶಕುಂತಲಾ ಉಮಾಸುಂದರ ರೈ ನಿರ್ದೇಶಕರಾದ ಕೃಷ್ಣಪ್ಪ ಕೊಳಂಗಾಯ , ರಾಜಗೋಪಾಲ ರಾಮ ಕಜೆ, ಶಾಲಾ ಸ್ಥಾಪಕರಾದ ಪೂವಪ್ಪ ಮಾಸ್ತರ್ ದೊಡ್ಡಡ್ಕ ,ಶಾಲಾ ಮುಖ್ಯ ಶಿಕ್ಷಕರಾದ ನಾಗರಾಜ್ ಜಿ.ಆರ್. ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಎನ್ ಎ ರಾಮಚಂದ್ರ, ವಿಶ್ವನಾಥ ಪೆರುಮುಂಡ, ಅಶೋಕ್ ಪೀಚೆಮನೆ, ನಿವೃತ್ತ ಶಿಕ್ಷಕರಾದ ಎಂ. ಆರ್ ನರೇಂದ್ರ ,ದೊಡ್ಡಣ್ಣ ಬರಮೇಲು , ಕ್ರೀ.ಶಾ ದೇವಸ್ಥಾನದ ಮೊಕ್ತೇಸರಾರದ ಎನ್.ಎ ಜಿತೇಂದ್ರ, ಪೋಷಕ ಸಂಘದ ಅಧ್ಯಕ್ಷರಾದ ಜಯರಾಮ ಕದಿಕಡ್ಕ, ವಿಶ್ವನಾಥ ಕುಂಬಳಚೇರಿ , ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಸಹ ಕಾರ್ಯದರ್ಶಿ ವೇದವ್ಯಾಸ್ ಭಟ್ ಸ್ವಾಗತಿಸಿ ಉಪಾಧ್ಯಕ್ಷರಾದ ಕೆ.ಕೆ ಪದ್ಮಯ್ಯರವರು ವಂದಿಸಿ , ಶ್ರೀಮತಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು. ಮಹಾಸಭೆಗೆ ಮೊದಲು ಶಾಲೆಯಲ್ಲಿ ಗಣಪತಿ ಹವನ ನಡೆಯಿತು.