ಓಡಬಾಯಿ : ವಿದ್ಯುತ್ ಕಂಬಕ್ಕೆ ಸುತ್ತಿದ ಹಸಿರು ಬಳ್ಳಿ

0

ಮೆಸ್ಕಾಂ ಇಲಾಖೆ ಗಮನಹರಿಸುವಂತೆ ಸಾರ್ವಜನಿಕರ ವಿನಂತಿ

ಸುಳ್ಯದ ಓಡಬಾಯಿಯಲ್ಲಿ ವಿದ್ಯುತ್ ಕಂಬಕ್ಕೆ
ಬಳ್ಳಿಗಳು ಸುತ್ತಿಕೊಂಡಿದ್ದು ವಿದ್ಯುತ್ ಕಂಬವೇ ಕಾಣದಂತಿದೆ.
ಇದರಿಂದ ವಿದ್ಯುತ್ ಸಮಸ್ಯೆಯೂ ಉಂಟಾಗಿದ್ದು ಅಪಾಯವನ್ನು ಆಹ್ವಾನಿಸುವಂತಿದೆ.


ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗು ತೊಂದರೆಯಾಗಲಿದ್ದು ಕೂಡಲೇ ಮೆಸ್ಕಾಂ ಇಲಾಖೆ ಎಚ್ಚೆತ್ತುಕೊಂಡು ಕಾಡು ಬಳ್ಳಿಗಳನ್ನು ತೆಗೆಯಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.