ಸುಬ್ರಹ್ಮಣ್ಯ: ಶ್ರೀ ವನದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ

0

ಅ.3 ರಿಂದ ಅ. 13 ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಕ್ಕೊಳಪಟ್ಟ
ಶ್ರೀ ವನದುರ್ಗಾದೇವಿ ದೇವಸ್ಥಾನದಲ್ಲಿ ಡಾl ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶರನ್ನವರಾತ್ರಿ ಉತ್ಸವ
ಧಾರ್ಮಿಕ ಮತ್ತು ಸಾಂಸ್ಕೃತಿಕ ಗಳೊಂದಿಗೆ ಅ.3 ರಿಂದ ಅ. 13 ರವರೆಗೆ ನಡೆಯಲಿದೆ.

ಅ.7 ಲಲತಾ ಪಂಚಮಿ, ಅ.9 ಶಾರದಾ ಪೂಜೆ, ಅ 11 ದುರ್ಗಾಷ್ಟಮಿ, ಅ. 12 ರಂದು.ಮಹಾನವಮಿ ನಡೆದು ಅ.13 ವಿಜಯದಶಮಿ, ಸಂಜೆ ಶಮಿ ಪೂಜೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಅ. 3 ರ ಸಂಜೆ ಸ್ಥಳೀಯರಿಂದ ವಿವಿಧ ವಿನೂತನ ಕಾರ್ಯಕ್ರಮ ನಡೆಯಲಿದೆ. ಅ.4 ರ ರಾತ್ರಿ 7:00: ಯಕ್ಷಬಿಂದು ತಂಡ ಉಜಿರೆ ಇವರಿಂದ ಪ್ರಸಂಗ ಹರಿದರ್ಶನ ಹಾಗೂ ಜಾಂಬವತಿ ಕಲ್ಯಾಣ ಎಂಬ ಪೌರಾಣಿಕ ಯಕ್ಷಗಾನ ನಡೆಯಲಿದೆ.ಅ.5 ರ ಬೃಂದಾವನ ನಾಟ್ಯಾಲಯ ಪುತ್ತೂರು ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ಕುಮಾರಸ್ವಾಮಿ ವಿದ್ಯಾಲಯದ ಮಕ್ಕಳಿಂದ ನೃತ್ಯ ವೈಭವ ನಡೆಯಲಿದೆ. ಅ.6ರಾತ್ರಿ 7.00 ರಿಂದ ನೃತ್ಯೋಪಾಸನಾ ಕಲಾ ಅಕಾಡೆಮಿ ರಿ. ಪುತ್ತೂರು ಇವರ ಸುಬ್ರಹ್ಮಣ್ಯ ಶಾಖೆ ಪ್ರಸ್ತುತ ಪಡಿಸುವ ನೃತ್ಯೋಹಂ ನಡೆಯಲಿದೆ. ‌
ಅ.7 ರಾತ್ರಿ 7:00 ರಿಂದ ಲ. ಕಿಶೋರ್ ಡಿ.ಶೆಟ್ಟಿ ಕೂಟದ ಕಲಾವಿರ ನಾಟಕ ಕಟೀಲ್ದಪ್ಪೆ ಉಳ್ಳಾಳ್ತಿ ಎಂಬ ತುಳು ಪೌರಾಣಿಕ ನಾಟಕ ನಡೆಯಲಿದೆ. ಅ.10 ರ ರಾತ್ರಿ 7:00 ರಿಂದ ಸಾನ್ವಿ ಮೆಲೊಡೀಸ್ ಕಾಸರಗೋಡು ಇವರಿಂದ ಭಕ್ತಿ ರಸಮಂಜರಿ ನಡೆರೆ ಅ.9ರ ರಾತ್ರಿ 7:00 ರಿಂದ ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ಯಕ್ಷಗಾನ ಬಯಲಾಟ “ತುಳಸಿ ಜಲಂಧರ” ನಡೆಯಲಿದೆ, ಅ.10 ರ ರಾತ್ರಿ 7:00 ರಿಂದ ಯಕ್ಷಗಾನ ನಾಟ್ಯ ಕಲಾ ಕೇಂದ್ರ ಸುಬ್ರಹ್ಮಣ್ಯ ಇವರಿಂದ “ಪುಣ್ಯಕೋಟಿ ಶ್ರೀ ಕೃಷ್ಣ” ಲೀಲಾಮೃತ ನಡೆಯಲಿದೆ.
ಅ. 11 ಸಂಜೆ ಗಂಟೆ 5:00ರಿಂದ ಭಕ್ತಿಸಂಗೀತ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗದಿಂದ ನಡೆದು ಸಂಜೆ ಗಂಟೆ 7:30ರಿಂದ ಭಕ್ತಿ ಸಂಗೀತ ಯಜೇಶ್ ಆಚಾರ್ ಮತ್ತು ಬಳಗ ದಿಂದ ನಡೆಯಲಿದೆ.
ಅ.12 ರ ರಾತ್ರಿ ಗಂಟೆ 7:00 ರಿಂದ ಯಕ್ಷಗಾನ ನಾಟ್ಯ – ಹಾಸ್ಯ – ವೈಭವ
ನಡೆಯಲಿದೆ.
ಅ.13ರ ಸಂಜೆ ಶಾರಬಾಂಬ ಯಕ್ಷಗಾನ ಮಂಡಳಿ ಬಿಳಿನೆಲೆ ಕೈಕಂಬ ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಅಲ್ಲದೆ ಪ್ರತಿದಿನ ಸಂಜೆ ವಿವಿಧ ಭಜನಾ ಮಂಡಳಿ ಗಳಿಂದ ಭಜನಾ ಕಾರ್ಯಕ್ರಮ ಜರುಗಲಿದೆ.