ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗವಾಹಿನಿ ಶಿವಾಜಿ ಶಾಖೆ ಅಜ್ಜಾವರ- ಸುಳ್ಯ ಪ್ರಖಂಡ ಇದರ ನೇತೃತ್ವದಲ್ಲಿ
1 ನೇ ತರಗತಿಯಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರವುಅ.3 ರಂದು ಮಹಿಷಮರ್ದಿನಿ ದೇವಳದಲ್ಲಿ ಉದ್ಘಾಟನೆಗೊಂಡಿತು.
ಅಜ್ಜಾವರ ಶ್ರೀ ಶಾಸ್ತವೇಶ್ವರ ದೇವಸ್ಥಾನ ಕರ್ಲಪ್ಪಾಡಿ,ಶ್ರೀ ದುರ್ಗಪರಮೇಶ್ವರಿ ಭಜನಾ ಮಂದಿರ,ಶ್ರೀ ಕೃಷ್ಣ ಭಜನಾ ಮಂದಿರ ಮೇನಾಲ, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಶ್ರೀ ಕ್ಷೇತ್ರ ಸನ್ನಿಧಾನಅಡ್ಪಂಗಾಯ,ಓಂಫ್ರೆಂಡ್ಸ್ಅಜ್ಜಾವರ,
ಪ್ರತಾಪ ಯುವಕ ಮಂಡಲ ಅಜ್ಜಾವರ, ಚೈತ್ರ ಯುವತಿ ಮಂಡಲ ಅಜ್ಜಾವರ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಜ್ಜಾವರ, ಕರ್ಲಪ್ಪಾಡಿ, ಮೇನಾಲ, ಮುಳ್ಯ ಅಟ್ಲೂರು ರವರ ಸಹಯೋಗದಲ್ಲಿ ದಿನಾಂಕ 3.10. 24 ರಿಂದ 10.10.2024 ತನಕ ಶಿಬಿರವು ನಡೆಯಲಿರುವುದು.
ದೇವಸ್ಥಾನದ ಧರ್ಮದರ್ಶಿ ಶಿವರಾವ್ ಬಯಂಬು ರವರು ದೀಪ ಪ್ರಜ್ವಲಿಸಿ ಶಿಬಿರವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರಾದ ಭಾಸ್ಕರ್ ರಾವ್ ಬಯಂಬ, ರಾಜೇಶ್ ಮೇನಾಲ, ಶಿವಪ್ರಕಾಶ್ ಅಡ್ಪಂಗಾಯ,
ವಿಶ್ವ ಹಿಂದೂಪರಿಷದ್ ಬಜರಂಗದಳ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ , ಸಂಯೋಜಕ್ ಹರಿಪ್ರಸಾದ್ ಎಲಿಮಲೆ, ಮಾತೃಶಕ್ತಿ ಪ್ರಮುಖರಾದ ಶ್ರೀಮತಿ ರೀನಾ ಚಂದ್ರಶೇಖರ, ದುರ್ಗವಾಹಿನಿ ಪ್ರಮುಖರಾದ ಶ್ರೀಮತಿ ವಿಶಾಲ ಸೀತಾರಾಮ ಕರ್ಲಪ್ಪಾಡಿ,ಶಿವಾಜಿ ಶಾಖೆ ಅಜ್ಜಾವರ ಘಟಕದ ಅಧ್ಯಕ್ಷ ನಾರಾಯಣ ಬಂಟ್ರಬೈಲು, ಮಾತೃಶಕ್ತಿ ಪ್ರಮುಖರಾದ ಶ್ರೀಮತಿ ಮಮತಾ ಪೃಥ್ವಿರಾಜ್ ಮೇನಾಲ, ದುರ್ಗವಾಹಿನಿ ಪ್ರಮುಖರಾದ ಶ್ರೀಮತಿ ರಮ್ಯಾ ಭವಾನಿ ಶಂಕರ ಸಿರ್ವಜೆ, ಗುರುರಾಜ್, ಶ್ರೀಮತಿ ಶಶ್ಮಿ ಭಟ್, ಶ್ರೀಮತಿ ಜಯಂತಿ ಜನಾರ್ಧನ,ವಿನಯ ನಾರಾಲು, ಭಜನಾ ತರಬೇತುದಾರರಾದ ಆನಂದ ಬಳ್ಪ,ಅವಿನ್ ಬೆಟ್ಟಂಪಾಡಿ,ಸುಭೋದ್ ಶೆಟ್ಟಿ ಮೇನಾಲ,ಆನಂದ ರಾವ್ ಕಾಂತಮಂಗಲ ವಿನಯ್ ಅಜ್ಜಾವರ, ಗಿರಿದರ ನಾರಾಲು ಉಪಸ್ಥಿತರಿದ್ದರು. ಶಿವಾಜಿ ಶಾಖೆಯ ಸತ್ಸಂಗ ಪ್ರಮುಖರಾದ ಸೀತಾರಾಮ ಶಾಂತಿ ಮಜಲು ಕಾರ್ಯಕ್ರಮ ನಿರೂಪಿಸಿದರು. ಗುರುರಾಜ್ ಅಜ್ಜಾವರ ಸ್ವಾಗತಿಸಿದರು. ಸುಳ್ಯ ಪ್ರಖಂಡದ ಕಾರ್ಯದರ್ಶಿ ನವೀನ್ ಎಲಿಮಲೆ ವಂದಿಸಿದರು. ಶಿವಾಜಿ ಶಾಖೆಯ ಕಾರ್ಯಕರ್ತರು ಸಹಕರಿಸಿದರು