ಕಳಂಜ ಗ್ರಾಮದ ಕಿಲಂಗೋಡಿ ನಿವಾಸಿ ಕಳಂಜ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಸಹಾಯಕರಾಗಿದ್ದ ದಿ. ಕೆ.ಎಂ.ಚೋಮರವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಯಾನೆ ಮಾಯಿಲಮ್ಮರವರು ಇಂದು ಮುಂಜಾನೆ ನಿಧನರಾದರು. ಅವರಿಗೆ ೮೬ ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಮೊಗೇರ ಸಂಘದ ತಾಲೂಕು ಕಾರ್ಯದರ್ಶಿ ಬಾಳಪ್ಪ ಕಿಲಂಗೋಡಿ, ಪಂಚಾಯತ್ ರಾಜ್ ತರಬೇತುದಾರ ನಾರಾಯಣ ಕಿಲಂಗೋಡಿ, ಶೇಖರ್ ಕಿಲಂಗೋಡಿ, ಇಬ್ಬರು ಪುತ್ರಿಯರು, ಮತ್ತು ಬಂಧುಗಳನ್ನು ಅಗಲಿದ್ದಾರೆ.