ಚೆಂಬು: ಪ್ರಾಥಮಿಕ ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ವೇದೇಶ್ ರಾಜ್ಯಮಟ್ಟಕ್ಕೆ ಆಯ್ಕೆ

0

ಕೊಡಗು ಜಿಲ್ಲೆಯ ಹುದಿಕೇರಿಯಲ್ಲಿ ಅ.1ರಂದು ನಡೆದ ಪ್ರಾಥಮಿಕ ಶಾಲಾ ವಿಭಾಗದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಚೆಂಬು ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿ ವೇದೇಶ್ ಬಿ.ಎಸ್. ಹೈಜಂಪ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈತ ಚೆಂಬು ಗ್ರಾಮದ ಸತೀಶ್ ಬೈತಡ್ಕ ಮತ್ತು ಶ್ರೀಮತಿ ಪದ್ಮಾವತಿ ದಂಪತಿಗಳ ಪುತ್ರ.