ನವೀಕೃತ ಶೋರೂಂ ಉದ್ಘಾಟನೆ
ಗ್ರಾಹಕರ ವಿಶ್ವಾಸ ಮತ್ತು ಸೇವೆಯಲ್ಲಿ ಕೂಲ್ ಮೊಬೈಲ್ ಮಾದರಿ – ಪಿ.ಬಿ ಸುದಾಕರ ರೈ
ಸುಳ್ಯದ ಖಾಸಗಿ ಬಸ್ಸು ನಿಲ್ದಾಣ ಬಳಿ ಶಫಿಕ್ ಕೆರೆಮೂಲೆ ಮಾಲಕತ್ವದಲ್ಲಿ ಕಳೆದ ಹದಿನೈದು ವರ್ಷಗಳಿಂದ ಮೊಬೈಲ್ ಮಾರಟ ಮತ್ತು ಸರ್ವಿಸಸ್ ಸೇವೆಯ ಮೂಲಕ ಜನರ ಪ್ರೀತಿ ಮತ್ತು ವಿಶ್ವಾಸಾರ್ಹ ಸೇವೆಯಲ್ಲಿ ಚಿರಪರಿಚಿತ ವಾಗಿರುವ ಮೊಬೈಲ್ ಮಳಿಗೆ ಇದೀಗ ನವೀಕರಣಗೊಂಡು ಶುಭಾರಂಭ ಗೊಂಡಿತು.
ಕೂಲ್ ಮೊಬೈಲ್ ನ ನವೀಕೃತ ಮಳಿಗೆಯನ್ನು ಅ.5 ರಂದು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ ಯವರು ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿ ಕಳೆದ 15 ವರ್ಷಗಳಿಂದ ಶಫಿಕ್ ಕೆರೆಮೂಲೆ ಮಾಲಕತ್ವ್ವದ ಕೂಲ್ ಮೊಬೈಲ್ ಗ್ರಾಹಕರ ವಿಶ್ವಾಸ ಮತ್ತು ಸೇವೆಯಿಂದಾಗಿ ಇಂದು ಎತ್ತರಕ್ಕೆ ಬೆಳೆದು ನಿಂತಿದೆ. ಬೆಳೆಯುತ್ತಿರುವ ಸುಳ್ಯ ಪಟ್ಟಣಕ್ಕೆ ಆಧುನೀಕರಣಕ್ಕೆ ತಕ್ಕಂತೆ ನವೀಕರಣಗೊಂಡಿದ್ದು ಇದು ಅಗತ್ಯ ಮತ್ತು ಮಾದರಿಯಾಗಿದೆ ಎಂದರು.
ಅಧ್ಯಕ್ಷತೆಯನ್ನು ಸುಳ್ಯ ನಗರ ಪಂಚಾಯತ್ ಕೆರೆಮೂಲೆ ವಾರ್ಡ್ ಸದಸ್ಯರು ಹಾಗೂ ಹಿರಿಯ ನ್ಯಾಯವಾದಿ ಎಂ. ವೆಂಕಪ್ಪಗೌಡ ವಹಿಸಿ ಶಫಿಕ್ ರವರ ಕುಟುಂಬದವರೊಂದಿಗೆ ಅನೇಕ ವರ್ಷಗಳಿಂದ ಉತ್ತಮ ಬಾಂಧವ್ಯ ಇದ್ದು, ಇವರ ಉದ್ಯಮವು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ನ ಮಾಜಿ ಸದಸ್ಯ ಹಾಗೂ ಗಾಂಧಿನಗರ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಕೆ.ಎಂ ಮುಸ್ತಫ, ನಗರ ಪಂಚಾಯತ್ ಸದಸ್ಯರಾದ ಕೆ.ಎಸ್ ಉಮ್ಮರ್, ಶರೀಫ್ ಕಂಠಿ, ಬಿ.ಎಂ.ಎಸ್ ಆಟೋ ಚಾಲಕ-ಮಾಲಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಮೊಬೈಲ್ ರಿಟೇಲ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ರಹಿಮಾನ್, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಉಧ್ಯಮಿಗಳಾದ ಅಬ್ದುಲ್ ಖಾದರ್ ಹಾಜಿ ಕೆರೆಮೂಲೆ, ಹಾಜಿ ಅಬೂಬಕ್ಕರ್ ಜಟ್ಟಿಪಳ್ಳ, ಎಂ.ಬಿ ಯಹ್ಯಾ, ಅನ್ವರ್ ಪಂಜಿಕಲ್ಲು,ಹಾಜಿ ಅಬ್ದುಲ್ ಕಲಾಂ ಕಟ್ಟೆಕ್ಕಾರ್, ಸಿದ್ದೀಕ್ ಕಟ್ಟೆಕ್ಕಾರ್, ಮಜೀದ್ ಸಿಟಿ ಮೆಡಿಕಲ್,ಸಂಶುದ್ದೀನ್ ಭಾರತ್, ಮೊದಲಾದವರು ಉಪಸ್ಥಿತರಿದ್ದರು.
ಅಶ್ರಫ್ ಗುಂಡಿ ಅರಂತೋಡು ಸ್ವಾಗತಿಸಿ, ಶಫಿಕ್ ಕೆರೆಮೂಲೆ ವಂದಿಸಿದರು. ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.