ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಭಕ್ತಿ,ಸಂಭ್ರಮದ ನವರಾತ್ರಿ ಉತ್ಸವ

0

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆಯು ಅ.02 ರಿಂದ ಪ್ರಾರಂಭಗೊಂಡಿದ್ದು ಅ.12 ರವರೆಗೆ ನವರಾತ್ರಿ ಪೂಜೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.


ಅ.05 ರಂದು ಬೆಳಿಗ್ಗೆ ಶ್ರೀ ದೇವಿ ಬಳಗ ಚೊಕ್ಕಾಡಿ ಇವರಿಂದ ಭಜನೆ ನಡೆಯಿತು.
ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಡೆಯಿತು.


ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.
ರಾತ್ರಿ ಗಂಟೆ 9.30 ಕ್ಕೆ ಮಹಾಪೂಜೆ ,ಅನ್ನಸಂತರ್ಪಣೆ ನಡೆಯಲಿದೆ.