ಯೋಗ ಸ್ಪರ್ಧೆಯಲ್ಲಿ ಅವನಿ ಎಂ.ಎಸ್. ರಾಜ್ಯಮಟ್ಟಕ್ಕೆ ಆಯ್ಕೆ

0


ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ನಡೆಯುತ್ತಿರುವ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಶಾಲಾ 14 ರ ವಯೋಮಾನದ ಅಥ್ಲೆಟಿಕ್ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಅವನಿ ಎಂ.ಎಸ್.ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಯಾದ ಅವನಿ ಎಂ.ಎಸ್. ಯೋಗ, ಗಾಯನ, ಚಿತ್ರಕಲೆ,ನೃತ್ಯ ವಿಭಾಗದಲ್ಲಿ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಅವನಿ ಎಂ.ಎಸ್.ಶ್ರೀಮತಿ ರೇಷ್ಮಾ ಮತ್ತು ಶಶಿಧರ ಎಂ.ಜೆ.ಯವರ ಪುತ್ರಿ.