ಪೆರುವಾಜೆ : ಭೀಕರ ಮಳೆ – ದೇವಸ್ಥಾನದ ಒಳಾಂಗಣಕ್ಕೆ ನುಗ್ಗಿದ ಮಳೆನೀರು – ಭಕ್ತಾದಿಗಳಿಂದ ಸ್ವಚ್ಛತೆ

0

ಪೆರುವಾಜೆಯಲ್ಲಿ ಸುರಿದ ಭಾರೀ ಮಳೆಗೆ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಒಳಗೆ ಮಳೆ ನೀರು ನುಗ್ಗಿದೆ.
ನವರಾತ್ರಿ ಪೂಜೆ ನಡೆಯುತ್ತಿರುವ ಸಂದರ್ಭದಲ್ಲಿ ಮಳೆ ನೀರು ಒಳಾಂಗಣ ಪ್ರವೇಶಿಸಿದ್ದು ಭಕ್ತಾದಿಗಳು ಕೂಡಲೇ ದೇವಸ್ಥಾನವನ್ನು ಸ್ವಚ್ಛಗೊಳಿಸಿದರು.
ಬಳಿಕ ವೈದಿಕ ಕಾರ್ಯಕ್ರಮಗಳು ನಡೆಯಿತು.


ಕೆಲವು ತಿಂಗಳ ಹಿಂದೆ ಮಳೆಗಾಲದಲ್ಲಿಯೂ ಮಳೆ ನೀರು ಒಳನುಗ್ಗಿದ್ದು ದೇವಸ್ಥಾನದ ಸುತ್ತಲೂ ನೀರು ಆವರಿಸಿತ್ತು.
ಮಳೆ ಕಡಿಮೆಯಾದ ಬಳಿಕ ನೀರಿನ ಮಟ್ಟ ತಗ್ಗಿದ್ದು ನಂತರ ದೇವಸ್ಥಾನದ ಒಳಾಂಗಣ,ಹೊರಾಂಗಣವನ್ನು ಸ್ವಚ್ಛಗೊಳಿಸಲಾಗಿತ್ತು.