ಸರ್ಕಾರಿ ನೌಕರರ ಸಂಘದ ಚುನಾವಣೆ : ನಾಳೆ (ಅ.9)ಯಿಂದ ನಾಮಪತ್ರ ಸಲ್ಲಿಕೆ ಆರಂಭ

0

2024-2029ನೇ ಅವಧಿಯ ಸುಳ್ಯ ತಾಲೂಕು ಶಾಖೆಗಳ ನಿರ್ದೇಶಕರ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿದ್ದು ನಾಳೆಯಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸುಳ್ಯ ತಾಲೂಕು ಚುನಾವಣಾಧಿಕಾರಿಯಾದ ಅಚ್ಚುತ ಪಿ ಇವರ ಸೂಚನೆಯಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ಸುಳ್ಯ ತಾಲ್ಲೂಕು ಶಾಖೆಯ ನಿರ್ದೇಶಕರು & ಪದಾಧಿಕಾರಿಗಳ ಚುನಾವಣೆಗಳನ್ನು ಸುಳ್ಯ ತಾಲೂಕು ಶಾಖೆ ನಿಗದಿಪಡಿಸಿದ ಸ್ಥಳದಲ್ಲಿ ಈ ಕೆಳಕಂಡ ದಿನಾಂಕಗಳಂತೆ ತಾಲೂಕು ಶಾಖೆಯ ಚುನಾವಣಾ ಅಧಿಸೂಚನೆಯನ್ನು ಹೊರಡಿಸಿದೆ.


ಅ.9ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇದೆ. ಅ.18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅ.19ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅಂದೇ ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುತ್ತದೆ. ಅ.21ರಂದು ನಾಮಪತ್ರ ವಾಪಸು ಪಡೆಯಲು ಅವಕಾಶ ನೀಡಲಾಗಿದೆ. ಅಂದೇ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಅ.28ರಂದು ಚುನಾವಣೆ ನಡೆಯಲಿದೆ. ಸಂಜೆ 4 ಗಂಟೆ ಗೆ ಮತದಾನ ಮುಗಿಯಲಿದ್ದು, ಬಳಿಕ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಘೋಷಣೆ ಯಾಗಲಿದೆ ಎಂದು ಚುನಾವಣಾಧಿಕಾರಿ‌ ಅಚ್ಯುತ‌ರವರು ತಿಳಿಸಿದ್ದಾರೆ.