ಪೆರಾಜೆ: ಕುಂಡಾಡು ಅಂಗನವಾಡಿ ಸಹಾಯಕಿ ಶ್ರೀಮತಿ ರವಿಕಲಾ ಕುಸಿದು ಬಿದ್ದು ಮೃತ್ಯು

0

ಅಂಗನವಾಡಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೋರ್ವರು ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಪೆರಾಜೆ ಗ್ರಾಮದ ಕುಂಡಾಡು ಚಾಮಕಜೆಯಲ್ಲಿ ಅ.8ರಂದು ಸಂಭವಿಸಿದೆ.

ಪೆರಾಜೆ ಗ್ರಾಮ ಸಹಾಯಕರಾಗಿರುವ ಕುಂಡಾಡು ಚಾಮಕಜೆಯ ಪದ್ಮಯ್ಯ ಅವರ ಪತ್ನಿ ಶ್ರೀಮತಿ ರವಿಕಲಾ ಮೃತಪಟ್ಟ ಮಹಿಳೆ.
ರವಿಕಲಾ ಅವರಿಗೆ ಪಕ್ಷಪಾತ ಕಾಯಿಲೆಯಿದ್ದು, ಅದಕ್ಕೆ ಔಷದಿ ಪಡೆದು ಗುಣಮುಖರಾಗಿದ್ದರೆನ್ನಲಾಗಿದೆ. ಅ.8ರಂದು ಮನೆಯಲ್ಲಿ ಹಠಾತ್ ಕುಸಿದು ಬಿದ್ದಾಗ ಅವರನ್ನು ಮನೆಯವರು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ಕರೆದೊಯ್ದಾಗ ಅವರು ಕೊನೆಯುಸಿರೆಳೆದಿದ್ದರೆಂದು ತಿಳಿದುಬಂದಿದೆ. ಅವರಿಗೆ 36 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಸೇರಿದಂತೆ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.