ಸುಳ್ಯ : ಕಾಫಿ ಬೆಳೆಗಾರರನ್ನು ಒಗ್ಗೂಡಿಸುವ ಬಗ್ಗೆ ಸಭೆ : ಸಂಪಾಜೆಯಲ್ಲಿ ಕಾಫಿ ಬೆಳೆ ವೀಕ್ಷಣೆ

0

ಸುಳ್ಯ ರೈತ ಉತ್ಪಾದಕ ಕಂಪನಿ ಮತ್ತು
ತೋಟಗಾರಿಕಾ ಇಲಾಖೆ ಸುಳ್ಯ
ಇವರ ಜಂಟಿ ಆಶ್ರಯದಲ್ಲಿ ಕಾಫಿ ಬೆಳೆಗಾರರನ್ನು ಒಗ್ಗೂಡಿಸುವ ಸಲುವಾಗಿ ರೈತರೊಂದಿಗೆ ಸಂವಾದ ಸಭೆಯು ಅ.08 ರಂದು
ಸುಳ್ಯದ ಎ .ಪಿ .ಎಂ .ಸಿ ಸಭಾಭವನದಲ್ಲಿ ನಡೆಯಿತು.
ಕೊಡಗು ಕಾಫಿ ಮಹಾ ಮಂಡಳಿ ಯ ವಿಜ್ಞಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು.


ಸಭೆಯಲ್ಲಿ ಸುಮಾರು 40ಕ್ಕೂ ಅಧಿಕ ಕಾಫಿ ಬೆಳೆಗಾರರು ಭಾಗವಹಿಸಿದ್ದರು.
ನಮ್ಮ ಜಿಲ್ಲೆ ಕಾಫಿ ಕೃಷಿಗೆ ಸೂಕ್ತವಾಗಿದೆಯೆ ಎಂದು ಪರಿಶೀಲಿಸಿ ಸೂಕ್ತ ಸಲಹೆ ನೀಡಿದರು.


ಸಂಪಾಜೆ ಭಾಗದಲ್ಲಿ 12,000 ಕಾಫಿ ಗಿಡಗಳನ್ನು ನೆಟ್ಟು ಬೆಳೆಸಿದ ಸಂಪಾಜೆ ಗ್ರಾಮದ ಕೀಲಾರು ರಾಜರಾಮ ಹಾಗೂ ಸುಮನ ಶ್ಯಾಂಪ್ರಸಾದರವರ ತೋಟ ವೀಕ್ಷಣೆಯಲ್ಲಿ ವಿಜ್ಞಾನಿಗಳೊಂದಿಗೆ ಇಲಾಖಾ ಅಧಿಕಾರಿಗಳು ಹಾಗೂ ಸಂಸ್ಥೆಯ ನಿರ್ದೇಶಕರಾದ ಜಯರಾಮ ಮುಂಡೋಳಿಮೂಲೆ ರಾಮಕೃಷ್ಣ ಬೆಳ್ಳಾರೆ ಹಾಗೂ ಜಗದೀಶ್ ಕೆ ಪಿ ರವರು ಭಾಗವಹಿಸಿದ್ದರು.