ಅಜ್ಜಾವರ ಗ್ರಾಮದ ಮೇದಿನಡ್ಕ ಶ್ರೀ ಮುತ್ತು ಮಾರಿಯಮ್ಮ ಆಡಳಿತ ಸಮಿತಿ, ಶ್ರೀ ರಾಮ ಭಜನಾ ಮಂದಿರ, ಮುತ್ತುಶ್ರೀ ಫ್ರೆಂಡ್ಸ್ ಕ್ಲಬ್ ಹಾಗೂ ಅಂಗನವಾಡಿ ಕೇಂದ್ರ ಮೇದಿನಡ್ಕ ಇದರ ಸಂಯುಕ್ತ ಆಶ್ರಯದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಅಜ್ಜಾವರ ಇದರ ಸಹಯೋಗದೊಂದಿಗೆ ಸ್ಥಳೀಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಮೇದಿನಡ್ಕ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ, ಶ್ರೀಮತಿ ಜಯಶೀಲ ಸಮುದಾಯ ಆರೋಗ್ಯ ಅಧಿಕಾರಿ ಅಜ್ಜಾವರ, ಕು.ಭವ್ಯಶ್ರೀ , ಸಮುದಾಯ ಆರೋಗ್ಯ ಅಧಿಕಾರಿ ಅಡ್ಪಂಗಾಯ, ಶ್ರೀಮತಿ ಜಯಶ್ರೀ, ಪ್ರಾಥಮಿಕ ಸುರಕ್ಷಾಧಿಕಾರಿ ಅಜ್ಜಾವರ, ಶ್ರೀಮತಿ ಶಿವಪಾಕ್ಯಂ, ಅಂಗನವಾಡಿ ಕಾರ್ಯಕರ್ತೆ ಮೇದಿನಡ್ಕ , ಆರೋಗ್ಯ ತಪಾಸಣೆಗೆ ನೇತೃತ್ವ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಭಾ ಕಾರ್ಡ್ ನೋಂದಣಿ ಮಾಡಲಾಯಿತು.ರಮೇಶ್ ಮೇದಿನಡ್ಕ ಕಾರ್ಯಕ್ರಮಕ್ಕೆ ಸಹಕರಿಸಿದರು.