ಸುಳ್ಯ ರೋಟರಿ ಕ್ಲಬ್ ವತಿಯಿಂದ ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ಮೆಂಟಲ್ ಹೆಲ್ತ್ ಅವಾರ್ನೆಸ್ ಕಾರ್ಯಕ್ರಮ

0

ರೋಟರಿ ಕ್ಲಬ್ ಸುಳ್ಯ ವತಿಯಿಂದ ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ವರ್ಡ್ ಮೆಂಟಲ್ ಹೆಲ್ತ್ ಡೇ ಹಾಗೂ ರೋಟರಿಯ ಡಿಸ್ಟ್ರಿಕ್ಟ್ ಪ್ರಾಜೆಕ್ಟ್ “ಮೆಂಟಲ್ ಹೆಲ್ತ್ “ ಅವಾರ್ನೆಸ್ ಅಂಗವಾಗಿ
ಮೆಂಟಲ್ ಹೆಲ್ತ್
ಅವಾರ್ನೆಸ್ ಕಾರ್ಯಕ್ರಮ ಅ. 10ರಂದು ಕಾನೂನು ವಿದ್ಯಾರ್ಥಿಗಳಿಗೆ ನಡೆಸಲಾಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಕೆವಿಜಿ ಮೆಡಿಕಲ್ ಕಾಲೇಜಿನ ಸೀನಿಯರ್ ರೆಸಿಡೆಂಟ್ ಡಿಪಾರ್ಟ್ಮೆಂಟ್ ಆಫ್ ಕಮ್ಯೂನಿಟಿ ಮೆಡಿಸಿನ್ ಡಾ. ಶ್ರದ್ಧಾ ಪಿ.ಎಸ್ ರವರು ಭಾಗವಹಿಸಿದ್ದರು.
ಕಾಲೇಜಿನ ಆಡಳಿತ ಅಧಿಕಾರಿ ಪ್ರೊ. ಕೆ.ವಿ ದಾಮೋದರ್ ಗೌಡ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಉದಯಕೃಷ್ಣ ಬಿ, ಕಾಲೇಜಿನ ಎನ್.ಎಸ್.ಎಸ್. ಸಂಯೋಜಕಿ ಅಸಿಸ್ಟೆಂಟ್ ಪ್ರೊಫೆಸರ್ ಶ್ರೀಮತಿ ನಯನಾ ಪಿ.ಯು ಹಾಗೂ ಯುವ ರೆಡ್ ಕ್ರಾಸ್ ವಿಂಗ್ ನ ಸಂಯೋಜಕಿ ಶ್ರೀಮತಿ ಅರ್ಚನಾ ಆರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಳ್ಯ ರೋಟರಿ ಕ್ಲಬ್‌ನ ಅಧ್ಯಕ್ಷೆ ರೊ. ಯೋಗಿತಾ ಗೋಪಿನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ರೋಟರಿ ಕ್ಲಬ್‌ನ ಕಾರ್ಯದರ್ಶಿ ಡಾ. ಹರ್ಷಿತಾ ಪುರುಷೋತ್ತಮ್ ವಂದಿಸಿದರು.
ರೊ. ಗಣೇಶ್ ಭಟ್ ಪಿ, ರೊ. ಸಂಜೀವ ಕುದ್ಪಾಜೆ ಮತ್ತು ರೊ. ಪ್ರಭಾಕರನ್ ಸಿ.ಹೆಚ್ ಸೇರಿದಂತೆ ಕಾಲೇಜಿನ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.