ದ.ಕ. ಕ್ಷೇತ್ರದ ವಿಧಾನಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ರಾಜು ಪೂಜಾರಿಯವರ ಪರ ಪ್ರಚಾರಕ್ಕಾಗಿ ಇಂದು ಸುಳ್ಯದ ಸದರ್ನ್ ರೆಸಿಡೆನ್ಸಿಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಪ್ರಚಾರ ಸಭೆ ನಡೆಯಿತು.
ಸಚಿವರು, ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಅಭ್ಯರ್ಥಿ ರಾಜು ಪೂಜಾರಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ. ಹರೀಶ್‌ಕುಮಾರ್ ಮೊದಲಾದವರು ಮಾತನಾಡಿ ರಾಜು ಪೂಜಾರಿಯವರಿಗೆ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಗ್ರಾ.ಪಂ., ನ.ಪಂ. ಸದಸ್ಯರುಗಳಾಗಿ ಗೆದ್ದಿರುವವರು , ಮತ್ತು ಪ್ರತೀ ಗ್ರಾ.ಪಂ.ನಲ್ಲಿರುವ ಇತರ ಗ್ರಾ.ಪಂ. ಸದಸ್ಯರುಗಳು ಮತ ಚಲಾಯಿಸುವಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರುಗಳು ಮಾಡಬೇಕೆಂದು ಕರೆ ನೀಡಿದರು.
ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಜಿ.ಕೃಷ್ಣಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಡಾ.ಬಿ.ರಘು, ಎಂ.ಎಸ್.ಮಹಮ್ಮದ್, ಧನಂಜಯ ಅಡ್ಪಂಗಾಯ, ನಿತ್ಯಾನಂದ ಮುಂಡೋಡಿ, ಟಿ.ಎಂ.ಶಹೀದ್, ಪ್ರದೀಪ್ ಪಾಂಬಾರು, ಸದಾನಂದ ಮಾವಜಿ, ಎ.ಸಿ.ವಿನಯರಾಜ್, ಕೆ.ಎಂ.ಮುಸ್ತಫ, ಶಾಹುಲ್ ಹಮೀದ್, ಗೀತಾ ಕೋಲ್ಚಾರ್, ಸರಸ್ವತಿ ಕಾಮತ್, ರಾಜೀವಿ ರೈ, ಎಸ್.ಸಂಶುದ್ದೀನ್, ಕೆ.ಪಿ.ಜಾನಿ, ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಎಂ.ವೆಂಕಪ್ಪ ಗೌಡ, ಸತೀಶ್ ಕೆಡೆಂಜಿ, ಶಾಫಿ ಕುತ್ತಮೊಟ್ಟೆ, ಜಯಪ್ರಕಾಶ್ ನೆಕ್ರೆಪ್ಪಾಡಿ, ಇಸ್ಮಾಯಿಲ್ ಪಡ್ಪಿನಂಗಡಿ, ನವೀನ್‌ಚಂದ್ರ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ಸುಳ್ಯ ಬ್ಲಾಕ್ ಅಧ್ಯಕ್ಷ ಪಿ.ಸಿ.ಜಯರಾಮರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ರಮಾನಾಥ ರೈ ಆಗಮನ ಸಚಿವರು ಮತ್ತು ಶಾಸಕರು ಪ್ರಚಾರ ಸಬೆ ಮುಗಿಸಿ ಸಭಾಂಗಣದಿಂದ ಕೆಳಗಿಳಿಯುತ್ತಿರುವಾಗ ಮಾಜಿ ಸಚಿವ ರಮಾನಾಥ ರೈಯವರು ಆಗಮಿಸಿದರು. ಅವರು ಅಲ್ಲಿಗೆ ಬಂದ ಗ್ರಾ.ಪಂ. ಸದಸ್ಯರುಗಳೊಡನೆ ಮತ್ತು ಮುಖಂಡರೊಡನೆ ಮಾತನಾಡಿ ವಿಧಾನಪರಿಷತ್ ಚುನಾವಣಾ ಅಭ್ಯರ್ಥಿ ಪರವಾಗಿ ಮತ ಯಾಚಿಸಿದರು.