ಪಂಜ: ನಾಳೆಯಿಂದ (ಅ.13) ಅ.19 ತನಕ ಜೇಸಿ ಸಪ್ತಾಹ

0

ನಾಳೆ(ಅ.13) ಸಪ್ತಾಹ ಉದ್ಘಾಟನೆ -ಕೆಸರು ಗದ್ದೆ ಕ್ರೀಡಾಕೂಟ

ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ -2024 ಅ.13 ರಿಂದ ಅ.19 ತನಕ ನಡೆಯಲಿದೆ.

ಪ್ರತಿ ದಿನ ವಿವಿಧ ಕಾರ್ಯಕ್ರಮಗಳೊಂದಿಗೆ ಘಟಕದ ಅಧ್ಯಕ್ಷ ಜೀವನ್ ಮಲ್ಕಜೆ ರವರ ಸಭಾಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಅ.13 ರಂದು ಮುಂಜಾನೆ ಗಂಟೆ 9.30 ರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವಠಾರದಲ್ಲಿ ಜೇಸಿ ಸಪ್ತಾಹ ಉದ್ಘಾಟನೆ ಮತ್ತು ಕೆಸರು ಗದ್ದೆ ಕ್ರೀಡಾಕೂಟ ಜರುಗಲಿದೆ.
ವಲಯ ಉಪಾಧ್ಯಕ್ಷ ಅಭಿಷೇಕ್ ಜಿ ಎಮ್ ಸಪ್ತಾಹ ಉದ್ಘಾಟಿಸಲಿದ್ದಾರೆ.
ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೀವನ್ ಮಲ್ಕಜೆ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಪಂಜಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಉಪಸ್ಥಿತರಿರುವರು. ಪುರುಷರ 470 ಕೆಜಿ 7 ಜನರ ಕೆಸರು ಗದ್ದೆ ಹಗ್ಗಜಗ್ಗಾಟ ಪ್ರಥಮ ರೂ.5024, ದ್ವಿತೀಯ ರೂ. 3024, ತೃತೀಯ ರೂ. 2024, ಚತುರ್ಥ ರೂ. 1024 ಮತ್ತು ಜೇಸಿಐ ಟ್ರೋಫಿ.
ಮಹಿಳೆಯರ 7 ಜನರ ಮುಕ್ತ ಕಸರುಗದ್ದೆ ಹಗ್ಗಜಗ್ಗಾಟ ಪ್ರಥಮ ರೂ. 3024, ದ್ವಿತೀಯ ರೂ. 2024, ತೃತೀಯ ರೂ 750, ಚತುರ್ಥ ರೂ 500 ಹಾಗೂ ಜೇಸಿಐ ಟ್ರೋಫಿ , ಏರ್ ಗನ್ ಶೂಟಿಂಗ್ ಸ್ಪರ್ಧೆ ಪ್ರಥಮ ರೂ.1000, ದ್ವಿತೀಯ ರೂ.750, ತೃತೀಯ ರೂ.500 ಹಾಗೂ ಜೇಸಿಐ ಟ್ರೋಫಿ.
ಮಹಿಳೆಯರ ಕೆಸರುಗದ್ದೆ ತ್ರೋಬಾಲ್ ಪಂದ್ಯಾಟ ಪ್ರಥಮ ರೂ.2024, ದ್ವಿತೀಯ ರೂ.1024 ಹಾಗೂ ಜೇಸಿಐ ಟ್ರೋಫಿ.


ಪುರುಷರ ಆಹ್ವಾನಿತ ತಂಡಗಳ ಕೆಸರುಗದ್ದೆ ವಾಲಿಬಾಲ್ ಪಂದ್ಯಾಟ, ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಲಿದೆ. ಸಂಜೆ ಬಹುಮಾನ ವಿತರಣಾ ಸಮಾರಂಭದಲ್ಲಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಮ್ ಏನೆಕಲ್ಲು ಬಹುಮಾನ ವಿತರಣೆ ಮಾಡಲಿದ್ದಾರೆ.

ಅ.14 ರಂದು ಬೆಳಿಗ್ಗೆ ಗಂಟೆ 9.30 ರಿಂದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಗಾರ ಸುಬ್ರಮಣ್ಯ ಕೆ ಎಸ್ ಎಸ್ ಕಾಲೇಜು ನಲ್ಲಿ ಜರುಗಲಿದೆ.ಮುಖ್ಯ ಅತಿಥಿಯಾಗಿ ಪ್ರಾಂಶುಪಾಲ ಡಾ.ದಿನೇಶ್ ಟಿ, ತರಬೇತುದಾರರಾಗಿ ವಲಯ ತರಬೇತುದರರಾದ ಸವಿತಾರ ಮುಡೂರು, ಸೋಮಶೇಖರ ನೇರಳ ಪಾಲ್ಗೊಳ್ಳಲಿದ್ದಾರೆ.

ಅ.15 ರಂದು ಬೆಳಿಗ್ಗೆ ಗಂಟೆ 10 ರಿಂದ ಸುರೇಶ್ ಬಲ್ನಾಡ್ ರವರ ತೋಟ- ಕೃಷಿ ಕ್ಷೇತ್ರ ಭೇಟಿ.

ಅ.16. ರಂದು ಸಂಜೆ ಗಂಟೆ 7 ರಿಂದ ಗುತ್ತಿಗಾರು ದೇವಿ ಸಿಟಿ ಕಾಂಪ್ಲೆಕ್ಸ್ ಸಭಾ ಭವನದಲ್ಲಿ ಸಾಧಕರಿಗೆ ಸನ್ಮಾನ ಮತ್ತು ನಗುವಿನ ಹಬ್ಬ ಕುಡ್ಲ ಕುಸಲ್ ತಂಡದಿಂದ ರವಿ ರಾಮಕುಂಜ ಅಭಿನಯದ ತೆಲಿಕೆದ ಕಮ್ಮೆನ.

ಅ.17 ರಂದು ಬೆಳಿಗ್ಗೆ ಗಂಟೆ 9 ರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಮುಕ್ತ ಚಿತ್ರಕಲಾ ಮತ್ತು ಕೇರಂ ಸ್ಪರ್ಧೆ ಜರುಗಲಿದೆ.
ಅ.18 ರಂದು ಸಂಜೆ ಗಂಟೆ 6.30 ರಿಂದ ಪಂಜ ಲಯನ್ಸ್ ಭವನದಲ್ಲಿ ಕೌಟುಂಬಿಕ ತರಬೇತಿ ಕಾರ್ಯಗಾರ.

ಅ.19 ರಂದು ಸಂಜೆ ಗಂಟೆ 7 ರಿಂದ ಸಮಾರಂಭ ಸಮಾರಂಭದಲ್ಲಿ ಕಮಲ ಪತ್ರ ಪುರಸ್ಕಾರ, ಸನ್ಮಾನ ಮತ್ತು ಸಾಂಸ್ಕೃತಿಕ ಸಂಭ್ರಮದಲ್ಲಿ ಡ್ಯಾನ್ಸ್ ಮತ್ತು ಬೀಟ್ಸ್ ಮತ್ತು ಸಂಸ್ಥೆ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ, ಲಕುಮಿ ತಂಡದ ಕುಸಾಲ್ದ ಕಲಾವಿದರ್ ಅಭಿನಯಿಸುವ ಅರವಿಂದ್ ಬೋಳಾರ್ ವಿಭಿನ್ನ ಪಾತ್ರದ ತುಳು ಹಾಸ್ಯಮಯ ನಾಟಕ ಒರಿಯಾಂಡಲಾ ಸರಿಬೋಡು ಪ್ರದರ್ಶನಗೊಳ್ಳಲಿದೆ