ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವನ್ನಾ ಭೋಜನ

0

ನಾಲ್ಕುರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಬೆಳಿಗ್ಗೆ ಶ್ರೀ ದೇವಿಗೆ ಮಹಾಪೂಜೆ ವಿದ್ಯಾರಂಭ ನಡೆದು ಶಮಿಪೂಜೆ ನಡೆಯಿತು.

ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಸಾಮೂಹಿಕ ನವನ್ನಾ ಭೋಜನ ನಡೆಯಿತು.

ಶ್ರೀ ದೇವಿಗೆ ಲಲಿತಾ ಪಂಚಮಿ ದಿವಸ ಸಾಮೂಹಿಕ ಕುಂಕುಮಾರ್ಚನೆ, ಚಂಡಿಕಾ ಹೋಮ, ಶಾರದ ಪೂಜೆ ದುರ್ಗಾಷ್ಟಮಿ, ಮಹಾನವಮಿ ವಾಹನ ಪೂಜೆ ಸೇರಿದಂತೆ ಇನ್ನಿತರ ವೈದಿಕ ಸೇವೆಗಳು ನಡೆದವು.

ಪ್ರತಿ ದಿನ ದೇವಸ್ಥಾನದಲ್ಲಿ ವಿವಿಧ ಭಜನಾ ಮಂಡಳಿಗಳು ಭಜನಾ ಸಂಕೀರ್ತನೆಯನ್ನು ನಡೆಸಿದವು.

ಈ ಸಂದರ್ಭದಲ್ಲಿ ಅರ್ಚಕ ವೃಂದ ವೈದಿಕ ಕಾರ್ಯಕ್ರಮಗಳನ್ನು ನಡೆಸಿದರು.

ದೇವಸ್ಥಾನದ ಅಭಿವೃದ್ಧಿ ಸಮಿತಿಯವರು ಆಡಳಿತ ಅಧಿಕಾರಿಗಳು ಹಾಗೂ ಊರ ಪರವೂರ ಭಕ್ತಾ ಅಭಿಮಾನಿಗಳು ಆಗಮಿಸಿ ಶ್ರೀದೇವಿಯ ದರ್ಶನ ಪಡೆದರು.

ವರದಿ : ಡಿ. ಎಚ್