ದೇವಚಳ್ಳ ಗ್ರಾಮದ ಹಲಸಿನಡ್ಕ ದಿ.ಗೋಪಾಲ ನಾಯ್ಕರ ಧರ್ಮಪತ್ನಿ ಶ್ರೀಮತಿ ಕಮಲ ಎಂಬವರು ಅ. 7 ರಂದು ಬೆಳಿಗ್ಗೆ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ಶ್ರೀಧರ್ ತಳೂರು, ಆನಂದ ಹಲಸಿನಡ್ಕ, ಶ್ರೀಮತಿ ಇಂದಿರಾ ಸುಬ್ರಾಯ ನಾಯ್ಕ ಗೂಡಿಂಜ (ಸ್ವಿಟ್ಜರ್ಲ್ಯಾಂಡ್) , ಶ್ರೀಮತಿ ಸುಗುಣ ದಿವಾಕರ ನಾಯ್ಕ ಸುಬ್ರಹ್ಮಣ್ಯ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.