ರಬ್ಬರ್ ಆಸಿಡ್ ಸೇವಿಸಿ ಅಸೌಖ್ಯಕ್ಕೊಳಗಾಗಿದ್ದ ಮರ್ಕಂಜ ಗ್ರಾಮದ ಗೋಳಿಯಡ್ಕ ಶೇಷಪ್ಪ ಗೌಡ ಪಾಲ್ತಾಡುರವರು ಇಂದು ಮೃತಪಟ್ಟರು. ಅವರಿಗೆ 7೦ ವರ್ಷ ವಯಸ್ಸಾಗಿತ್ತು.
ಶೇಷಪ್ಪ ಗೌಡರು ನಾಲ್ಕು ದಿನಗಳ ಹಿಂದೆ ರಬ್ಬರ್ ಆಸಿಡ್ ಸೇವಿಸಿ ಮಂಗಳೂರಿನ ಎನಪೋಯ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅಲ್ಲಿಂದ ಸುಳ್ಯ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರು ಮೃತಪಟ್ಟರೆಂದು ತಿಳಿದುಬಂದಿದೆ.
ಮೃತರು ಪುತ್ರ ಲಕ್ಷ್ಮೀಶ, ಪುತ್ರಿಯರಾದ ವೀಣಾಕುಮಾರಿ, ನಮ್ರತಾ, ಅಳಿಯಂದಿರಾದ ಮುರಳೀಧರ, ನಂದೀಶ, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.