ಸುಳ್ಯ ಅಜ್ಜಾವರದ ಮುಳ್ಯ ಅಟ್ಲೂರು ನಿವಾಸಿ ಸಿವಿಲ್ ಇಂಜಿನಿಯರ್ ಆಗಿರುವ ಬಿ.ಸಾಧನ್ ಶೆಟ್ಟಿಯವರು ಬೆಂಗಳೂರು ಮೂಲದ ಶೋಭಾ ಹರ್ಟ್‌ಲ್ಯಾಂಡ್ ಕಂಪೆನಿಗೆ ಆಯ್ಕೆಗೊಂಡಿದ್ದು, ಅವರು ಕಂಪೆನಿಯ ವತಿಯಿಂದ ಉದ್ಯೋಗಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈಗೆ ಇಂದು ತೆರಳುತ್ತಿದ್ದಾರೆ.
ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪೂರೈಸಿರುವ ಸಾಧನ್ ಈ ಹಿಂದೆ ಹೈದರಾಬಾದ್‌ನ ಸಂಸ್ಥೆಯೊಂದರಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದರು. ಇವರು ಮುಳ್ಯ ಅಟ್ಲೂರಿನ ಬಿ. ಸಂಜೀವ ಶೆಟ್ಟಿ- ಶ್ರೀಮತಿ ನಳಿನಾಕ್ಷಿ ಶೆಟ್ಟಿ ದಂಪತಿಯ ಪುತ್ರ.