ರಸ್ತೆ ದಾಟುತ್ತಿದ್ದ ವೃದ್ಧನಿಗೆ ಬೈಕ್ ಡಿಕ್ಕಿ-ಗಾಯ

0

3 ದಿನಗಳ ಹಿಂದೆ ಕಲ್ಲುಗುಂಡಿ ಪೇಟೆಯಲ್ಲಿ ನಡೆದ ಘಟನೆ

ಜಸ್ಟ್ ಮಿಸ್ – ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ


ರಸ್ತೆ ದಾಟುತ್ತಿದ್ದ ವೃದ್ಧನಿಗೆ ಬೈಕ್ ಡಿಕ್ಕಿಯಾದ ಘಟನೆ 3 ದಿನಗಳ ಹಿಂದೆ ಕಲ್ಲುಗುಂಡಿ ಪೇಟೆಯಲ್ಲಿ ಸಂಭವಿಸಿದೆ. ನಡು ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ವೃದ್ಧರನ್ನು ಸ್ಥಳೀಯರು ಸೇರಿ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ.

ಗೋಣಿಕಪ್ಪ ಮೂಲದ ವೃದ್ಧ ಪುತ್ತೂರು ಹೋಗಿ ಪುನಃ ಮಡಿಕೇರಿ ಹೋಗಲು ಕಲ್ಲುಗುಂಡಿಯಲ್ಲಿ ಇಳಿದಿದ್ದರು ಎನ್ನಲಾಗಿದೆ.

ಅಪಘಾತ ನಡೆಸಿದ ಬೈಕ್ ಮದೆನಾಡು ಕಡೆಯದ್ದು ಎಂದು ತಿಳಿದು ಬಂದಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.