ಸುಳ್ಯ ತಾಲೂಕಿನಲ್ಲಿ ವೈರಲ್ ಫೀವರ್ ಜೋರಾಗಿದ್ದು , ಈ ನಡುವೆ ಇಲಿ ಜ್ವರಕ್ಕೆ ತುತ್ತಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಜಾಲ್ಸೂರು ಗ್ರಾಮದ ಸೋಣಂಗೇರಿಯ ಸುಡಿಂಕಿರಿ ಮೂಲೆಯಿಂದ ವರದಿಯಾಗಿದೆ.
ಸುಡಿಂಕಿರಿ ಮೂಲೆಯ ಚಂದ್ರಶೇಖರ (36)ರವರು ಜ್ವರದ ಹಿನ್ನಲೆ ಕಳೆದ 1 ವಾರದಿಂದ ಮಂಗಳೂರಿನ ಶ್ರೀನಿವಾಸ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅ.14ರಂದು ಸಾವನ್ನಪ್ಪಿದ್ದಾರೆ. ಮೃತರು ತಂದೆ ಬೊಳ್ಳಾಡಿ, ತಾಯಿ ಚಿರ್ದೆ, ತಂಗಿ ಗಿರಿಜಾ, ಕುಟುಂಬ ವರ್ಗದವರು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿರುತ್ತಾರೆ.