ಸುಳ್ಯ ಸರಕಾರಿ ನೌಕರರ ಸಂಘ : 36 ನಾಮಪತ್ರ ಸಲ್ಲಿಕೆ

0

ಶಿಕ್ಷಕರು, ಶಿಕ್ಷಣ ಇಲಾಖೆ ಹೊರತು ಪಡಿಸಿ ಉಳಿದೆಲ್ಲ ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಸಾಧ್ಯತೆ

ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ನೂತನ ಆಡಳಿತ ಮಂಡಳಿಗೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯಗೊಂಡಿದ್ದು, ೩೩ ನಿರ್ದೇಶಕ ಸ್ಥಾನಗಳಿಗೆ ೩೬ ನಾಮಪತ್ರಗಳು ಸಲ್ಲಿಕೆಯಾಗಿವೆ. ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಹೊರತು ಪಡಿಸಿ ಉಳಿದೆಲ್ಲ ಇಲಾಖೆಗಳ ಎಲ್ಲಾ ನಿರ್ದೇಶಕ ಸ್ಥಾನಗಳಿಗೆ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿರುವುದರಿಂದ ಅವರೆಲ್ಲರೂ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ.


ಪ್ರಾಥಮಿಕ ಶಾಲೆಯ ೪ ನಿರ್ದೇಶಕ ಸ್ಥಾನಗಳಿಗೆ ೬ ಮಂದಿ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ೧ ನಿರ್ದೇಶಕ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿರುವುದರಿಂದ ಚುನಾವಣೆ ನಡೆಯಲಿದೆ.
ಒಂದೊಂದೇ ನಾಮಪತ್ರ
ಕೃಷಿ ಇಲಾಖೆಯ ೧ ನಿರ್ದೇಶಕ ಸ್ಥಾನಕ್ಕೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾಗಿರುವ ಗುರುಪ್ರಸಾದ್ ಎಂ.ಎಸ್., ಪಶುಪಾಲನೆ ಮತ್ತು ಪಶು ಸಂಗೋಪನಾ ಇಲಾಖೆಯ ೧ ನಿರ್ದೇಶಕ ಸ್ಥಾನಕ್ಕೆ ಪಶು ವೈದ್ಯಾಧಿಕಾರಿ ಡಾ| ನಿತಿನ್ ಪ್ರಭು, ಕಂದಾಯ ಇಲಾಖೆಯ ೩ ನಿರ್ದೇಶಕ ಸ್ಥಾನಕ್ಕೆ ಉಪತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್., ಗ್ರಾಮ ಆಡಳಿತಾಧಿಕಾರಿಗಳಾದ ಗುಂಡಗತ್ತಿ ಶಿವಕುಮಾರ್, ಮಾರುತಿ ಕಾಂಬ್ಲೆ, ಲೋಕೋಪಯೋಗಿ ಇಲಾಖೆಯ ೧ ಸ್ಥಾನಕ್ಕೆ ದ್ವಿತೀಯ ದರ್ಜೆ ಸಹಾಯಕರಾಗಿರುವ ಶ್ರೀಮತಿ ರಾಧಿಕಾ, ಜಿಲ್ಲಾ ಪಂಚಾಯತ್ ಇಲಾಖೆಯ ೧ ನಿರ್ದೇಶಕ ಸ್ಥಾನಕ್ಕೆ ದ್ವಿತೀಯ ದರ್ಜೆ ಸಹಾಯಕರಾಗಿರುವ ನೇಮಿಚಂದ್ರ, ಸರಕಾರಿ ಪ್ರಾಥಮಿಕ ಶಾಲಾ ೨ ನಿರ್ದೇಶಕ ಸ್ಥಾನಕ್ಕೆ (ಪದವೀಧರ ವಿಭಾಗ) ಮುರುಳ್ಯ ಶಾಲಾ ಶಿಕ್ಷಕಿ ನಳಿನಾಕ್ಷಿ ಬಿ., ಕೋಲ್ಚಾರು ಶಾಲಾ ಶಿಕ್ಷಕ ರಂಗನಾಥ ಎಂ.ಎಸ್., ಸರಕಾರಿ ಪ್ರೌಢಶಾಲಾ ವಿಭಾಗದ ೨ ನಿರ್ದೇಶಕ ಸ್ಥಾನಕ್ಕೆ ದುಗಲಡ್ಕ ಪ್ರೌಢಶಾಲಾ ಶಿಕ್ಷಕ ಉಣ್ಣಿಕೃಷ್ಣ ಸಿ, ಎಣ್ಮೂರು ಸರಕಾರಿ ಪ್ರೌಢಶಾಲಾ ಶಿಕ್ಷಕ ಲಿಂಗಪ್ಪ ಬೆಳ್ಳಾರೆ, ಸರಕಾರಿ ಪ.ಪೂ. ಕಾಲೇಜು ಮತ್ತು ಪದವಿ ಕಾಲೇಜುಗಳ ೧ ನಿರ್ದೇಶಕ ಸ್ಥಾನಕ್ಕೆ ಸುಳ್ಯ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸತೀಶ್ ಕುಮಾರ್ ಕೊಯಿಂಗಾಜೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ೧ ನಿರ್ದೇಶಕ ಸ್ಥಾನಕ್ಕೆ ಬಿಸಿಎಂ ಇಲಾಖೆಯ ಮೇಲ್ವಿಚಾರಕ ವಿಜಯ ಎಂ.ಡಿ., ಅರಣ್ಯ ಇಲಾಖೆಯ ೧ ನಿರ್ದೇಶಕ ಸ್ಥಾನಕ್ಕೆ ವೀರಭದ್ರಯ್ಯ ಕರಣೀಮಠ (ಸಾಮಾಜಿಕ ಅರಣ್ಯ), ಆರೋಗ್ಯ ಇಲಾಖೆಯ ೪ ನಿರ್ದೇಶಕ ಸ್ಥಾನಕ್ಕೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ., ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಬೀನಾ ಕೆ.ಬಿ., ಲೀಲಾವತಿ ಎಂ., ಆರೋಗ್ಯ ನಿರೀಕ್ಷಣಾಧಿಕಾರಿ ಗುರುಪ್ರಸಾದ್, ತೋಟಗಾರಿಕಾ ಇಲಾಖೆಯ ೧ ನಿರ್ದೇಶಕ ಸ್ಥಾನಕ್ಕೆ ತೋಟಗಾರಿಕಾ ಅಧಿಕಾರಿ ಅರಬಣ್ಣ ಪೂಜೇರಿ, ಖಜಾನೆ ಇಲಾಖೆಯ ೧ ನಿರ್ದೇಶಕ ಸ್ಥಾನಕ್ಕೆ ಖಜಾನಾಧಿಕಾರಿ ಪ್ರಕಾಶ್ ವಿ., ಸರ್ವೆ ಇಲಾಖೆಯ ೧ ನಿರ್ದೇಶಕ ಸ್ಥಾನಕ್ಕೆ ತಾಲೂಕು ಸರ್ವೆಯರ್ ಜಗದೀಶ್ ಜಿ., ನ್ಯಾಯಾಂಗ ಇಲಾಖೆಯ ೨ ನಿರ್ದೇಶಕ ಸ್ಥಾನಕ್ಕೆ ಮಂಜು, ಶ್ರೀಕೃಷ್ಣ, ಗ್ರಾಮೀಣಾಭಿವೃದ್ಧಿ ಇಲಾಖೆಯ ೨ ನಿರ್ದೇಶಕ ಸ್ಥಾನಕ್ಕೆ ತಾಲೂಕು ಪಂಚಾಯತ್ ಮ್ಯಾನೇಜರ್ ಹರೀಶ್ ಕೆ., ಉಬರಡ್ಕ ಮಿತ್ತೂರು ಪಿಡಿಒ ರವಿಚಂದ್ರ ಅಕ್ಕಪ್ಪಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ೧ ನಿರ್ದೇಶಕ ಸ್ಥಾನಕ್ಕೆ ಮೇಲ್ವಿಚಾರಕಿ ವಿಜಯ ಜೆ.ಡಿ., ಎಪಿಎಂಸಿ ೧ ನಿರ್ದೇಶಕ ಸ್ಥಾನಕ್ಕೆ ಕಾರ್ಯದರ್ಶಿ ರವೀಂದ್ರ ಎಸ್., ಅಬಕಾರಿ ಇಲಾಖೆಯ ೧ ನಿರ್ದೇಶಕ ಸ್ಥಾನಕ್ಕೆ ಅಬಕಾರಿ ರಕ್ಷಕ ರಘುನಾಥ ಬಜಂತ್ರಿ ನಾಮಪತ್ರ ಸಲ್ಲಿಸಿದ್ದಾರೆ. ಈ ಎಲ್ಲ ನಿರ್ದೇಶಕ ಸ್ಥಾನಗಳಿಗೂ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿರುವುದರಿಂದ ಅವರೆಲ್ಲರೂ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ.
ಶಿಕ್ಷಕರು, ಶಿಕ್ಷಣ ಇಲಾಖೆಯಲ್ಲಿ ಚುನಾವಣೆ
ಪ್ರಾಥಮಿಕ ಶಾಲಾ ಶಿಕ್ಷಕರ ೪ ನಿರ್ದೇಶಕ ಸ್ಥಾನಗಳಿಗೆ ೬ ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಗುತ್ತಿಗಾರು ಶಾಲೆಯ ಸಹಶಿಕ್ಷಕ ಕುಶಾಲಪ್ಪ ತುಂಬತ್ತಾಜೆ, ಮಡಪ್ಪಾಡಿ ಶಾಲೆಯ ಸಹಶಿಕ್ಷಕ ಕುಶಾಲಪ್ಪ ಪಾರೆಪ್ಪಾಡಿ, ಸುಳ್ಯ ಮಾಧರಿ ಶಾಲೆಯ ಸಹ ಶಿಕ್ಷಕ ಚಂದ್ರಶೇಖರ ಪಿ., ಕೋಲ್ಚಾರು ಶಾಲೆಯ ಸಹ ಶಿಕ್ಷಕಿ ಜಲಜಾಕ್ಷಿ ಕೆ.ಡಿ., ಅಡ್ಪಂಗಾಯ ಶಾಲೆಯ ಮುಖ್ಯ ಶಿಕ್ಷಕಿ ಧನಲಕ್ಷ್ಮಿ ಕುದ್ಪಾಜೆ, ಅರಂತೋಡು ಶಾಲೆಯ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ಬನ ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು ೧೯೭ ಮತಗಳಿದ್ದು ಅತೀ ಹೆಚ್ಚು ಮತ ಪಡೆಯುವ ೪ ಮಂದಿ ಶಿಕ್ಷಕರು ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆ.
ಶಿಕ್ಷಣ ಇಲಾಖೆಯಲ್ಲಿ ೧ ಸ್ಥಾನಕ್ಕೆ ಶಿಕ್ಷಕಣಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕರಾಗಿರುವ ಶಿವಪ್ರಸಾದ್ ಕೆ.ವಿ. ಹಾಗೂ ದ್ವಿತೀಯ ದರ್ಜೆ ಸಹಾಯಕರಾಗಿರುವ ಪೃಥ್ವಿ ಕುಮಾರ್ ಟಿ ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು ೨೨ ಮಂದಿ ಮತದಾರರಿದ್ದು ಅತೀ ಹೆಚ್ಚು ಮತ ಪಡೆದವರು ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ.
ಅ.೨೧ರಂದು ನಾಮಪತ್ರ ವಾಪಸ್ಸು ಪಡೆಯಲು ಅವಕಾಶ ನೀಡಲಾಗಿದ್ದು, ಅ.೨೮ರಂದು ಚುನಾವಣೆ ನಡೆಯುವುದು.