ಅ.2 ರ ಗಾಂಧಿಜಯಂತಿಯಂದು ಪಯಸ್ವಿನಿ ಯುವಕ ಮಂಡಲದ ವತಿಯಿಂದ ಸ್ವಚ್ಚತಾ ಕಾರ್ಯ ಕೈಗೊಂಡ ಸ್ಥಳದಲ್ಲಿ ರಾಶಿ ಕಸ ಬಿದ್ದ ಹಾಗೂ ಕಸದ ರಾಶಿಯಲ್ಲಿ ಪರಿಶೀಲನೆ ನಡೆಸಿದಾಗ ಸಿಕ್ಕಿದ ಮಾಹಿತಿಯನ್ನು ಯುವಕರು ನ.ಪಂ. ಮುಖ್ಯಾಧಿಕಾರಿಗಳಿಗೆ ನೀಡಿರುವುದಾಗಿ ತಿಳಿದುಬಂದಿದೆ.
ಭಸ್ಮಡ್ಕ ಜಂಕ್ಷನ್ ನಿಂದ – ಕುರುಂಜಿಭಾಗ್ ರಸ್ತೆಯಲ್ಲಿ ಸ್ವಚ್ಚತೆ ಮಾಡಲಾಗಿತ್ತು. ಈ ರಸ್ತೆಯಬದಿಯಲ್ಲಿ ಅ.16ರಂದು ಕಸವನ್ನು ತಂದು ಹಾಕಲಾಯಿತು. ಕಸ ಬಿದ್ದಿರುವುದನ್ನು ಕಂಡ ವಿನ್ಯಾಸ್ ಕುರುಂಜಿ, ಅವಿನಾಶ್ ಕುರುಂಜಿ ಮೊದಲಾದವರು ಕಸವನ್ನು ನೋಡಿದಾಗ ಅದರಲ್ಲಿ ವಿದ್ಯಾರ್ಥಿ ಯೊಬ್ಬನ ದಾಖಲೆ ದೊರೆಯಿತು. ತಕ್ಷಣ ಅದನ್ನು ನ.ಪಂ. ಮುಖ್ಯಾಧಿಕಾರಿ ಗಳಿಗೆ ವಾಟ್ಸಾಪ್ ನಲ್ಲಿ ಕಳುಹಿಸಿ, ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ. ನ.ಪಂ. ಮುಖ್ಯಾಧಿಕಾರಿ ಗಳು ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.