ಪಂಜ: ಜೇಸಿ ಸಪ್ತಾಹ ಸಮಾರೋಪ

0

⬆️ ವಾಸುದೇವ ಮೇಲ್ಪಾಡಿ ಯವರಿಗೆ ಕಮಲ ಪತ್ರ ಪುರಸ್ಕಾರ

⬆️ ವಿಶ್ವ ಶಾಂತಿಗಾಗಿ ಸ್ಥಾಪನೆ ಗೊಂಡ ಜೇಸಿ: ಚಂದ್ರಹಾಸ ರೈ

⬆️ ಜೇಸಿ ಎಂಬುದು ಊರಿಗೆ ವರ: ಎಂ ಪಿ ಉಮೇಶ್

ಪಂಜ ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ -2024 ಅ.19 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸಮಾರೋಪ ಗೊಂಡಿತು.

ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೀವನ್ ಮಲ್ಕಜೆ ಸಭಾಧ್ಯಕ್ಷತೆ ವಹಿಸಿದ್ದರು.

ಜೇಸಿಐ ಪೂರ್ವ ವಲಯಾಧ್ಯಕ್ಷ ಚಂದ್ರಹಾಸ ರೈ ಕಮಲ ಪತ್ರ ಪುರಸ್ಕರಿಸಿ ಮಾತನಾಡಿ “ಕಳೆದ 27 ವರುಷಗಳಿಂದ ಜೇಸಿಐ ಪಂಜ ಪಂಚಶ್ರೀ ಜೇಸಿಯ ಆಶಯಗಳನ್ನು,ಉದ್ದೇಶದಂತೆ ಉತ್ತಮ ಕಾರ್ಯಕ್ರಮಗಳನ್ನು ನಿರಂತರ ನೀಡುತ್ತಾ ಬಂದಿರುವ ಹೆಗ್ಗಳಿಕೆ ಇದೆ”. ಎಂದು ಅವರು ಹೇಳಿದರು.

“ಮೊದಲನೇಯ ಮತ್ತು ಎರಡನೇಯ ಜಾಗತಿಕ ಯುದ್ಧ ಮುಗಿದ ಮೇಲೆ ಜಗತ್ತಿನಲ್ಲಿ ಈ ರೀತಿಯ ಹಿಂಸೆ ನಡೆಯ ಬಾರದು ಸಾಮರಸ್ಯದ ಬದುಕು ಕಟ್ಟಲು ಎಂಬ ಉದ್ದೇಶದಿಂದ , ಜಾಗತಿಕ ಶಾಂತಿಗಾಗಿ ಸ್ಥಾಪನೆ ಗೊಂಡ ಸಂಸ್ಥೆ ಜೇಸಿ . ಪ್ರಸ್ತುತ ಜಗತ್ತು ಅತೀ ವೇಗದ ಬೆಳವಣಿಗೆ ಜೊತೆಗೆ ಕೆಡುಕು ವಿಚಾರಗಳು ನಡೆಯುತ್ತಿದೆ. ಇಂತಹ ಸೂಕ್ಷ್ಮ ಸಂಗತಿಗಳ ವಿಚಾರಗಳನ್ನು ಜಾಗೃತಿ ಮೂಡಿಸುವ ಕೆಲಸ ಮನೆ ಮನೆ ತಲುಪಿಸುವ ಕಾರ್ಯಕ್ರಮಗಳು ಆಗಬೇಕು”ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಬೆಳ್ಳಾರೆ ಜ್ಞಾನ ಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ ಪಿ ಉಮೇಶ್ ಮಾತನಾಡಿ.
” ಜೇಸಿ ಎಂಬುದು ಊರಿಗೆ ವರ. ಜೇಸಿ ಸಂಸ್ಥೆಯಿಂದಾಗಿ ಕಾರ್ಯಕ್ರಮದಲ್ಲಿದ್ದ ದೊಡ್ಡ ಕೊರತೆಗಳನ್ನು ನೀಗಿಸಿದೆ. ಜೇಸಿಯಿಂದಾಗಿ ಕಾರ್ಯಕ್ರಮಗಳು ಅತ್ಯಂತ ಅಚ್ಚುಕಟ್ಟಾಗಿ ಶಿಷ್ಟಾಚಾರದಲ್ಲಿಯೇ ನಡೆಯುತ್ತಿದೆ. ಇದರಲ್ಲಿ ಸೇರಿದವರು ಉತ್ತಮ ವ್ಯಕ್ತಿತ್ವ,ನಾಯಕರಾಗಿ ಬೆಳೆದಿದ್ದಾರೆ”. ಎಂದು ಅವರು ಹೇಳಿದರು.

ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ವಾಸುದೇವ ಮೇಲ್ಪಾಡಿ ಯವರಿಗೆ ಕಮಲ ಪತ್ರ ಪುರಸ್ಕಾರ ಸ್ವೀಕರಿಸಿದರು.

ಅಂತರಾಷ್ಟ್ರೀಯ ಈಜು ಪಟು ದಿಗಂತ್ ವಿ ಎಸ್, ಮೈಸೂರು ವಿಶ್ವವಿದ್ಯಾನಿಲಯದ ರ್‍ಯಾಂಕ್ ವಿಜೇತೆ ಪ್ರಜ್ಞಾ ಎ ಡಿಸೋಜ, ಉದಯೋನ್ಮುಖ ಯಕ್ಷಗಾನ ಭಾಗವತೆ ರಚನಾ ಚಿದ್ಗಲ್ ರವರು ಸನ್ಮಾನ ಸ್ವೀಕರಿಸಿ ದರು.
ಇದೇ ವೇಳೆ ಪಂಚಶ್ರೀ ವಿದ್ಯಾನಿಧಿ ಮೇಘಶ್ರೀ ಪಂಬೆತ್ತಾಡಿ, ಕಾವ್ಯಶ್ರೀ ಡಿ ಎಸ್ ಕೇನ್ಯ, ಸಚಿನ್ ಬಿ ಎನ್ ಬನ ಪಂಜ ಸ್ವೀಕರಿಸಿದರು. ಕ್ರೀಡಾ ಸಾಧಕರಾದ ವಿನಯ್, ದರ್ಶನ್ ದತ್ತಿ ನಿಧಿ ಸ್ವೀಕರಿಸಿದರು. .
ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ನಿಕಟಪೂರ್ವಾಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ, ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ, ಸಪ್ತಾಹ ನಿರ್ದೇಶಕ ವಾಚಣ್ಣ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಕಾಶ್ ಅಳ್ಪೆ ವೇದಿಕೆಗೆ ಆಹ್ವಾನಿಸಿದರು. ಜೀವನ್ ಮಲ್ಕಜೆ ಸ್ವಾಗತಿಸಿದರು. ಕಾರ್ತಿಕ್ ಕಣ್ಕಲ್ ಜೇಸಿ ವಾಣಿ ನುಡಿದರು. ವಾಚಣ್ಣ ಕೆರೆಮೂಲೆ ಪ್ರಾಸ್ತಾವಿಕ ಮಾತನಾಡಿದರು. ಕಿರಣ್ ನೆಕ್ಕಿಲ, ತೀರ್ಥಾನಂದ ಕೊಡೆಂಕಿರಿ, ಕಾರ್ತಿಕ್ , ಕೌಶಿಕ ಕುಳ, ಶಿವಪ್ರಸಾದ್ ಹಾಲೆಮಜಲು ಅತಿಥಿಗಳನ್ನು, ಸನ್ಮಾನಿತರನ್ನು ಪರಿಚಯಿಸಿದರು. ಜೀವನ್ ಶೆಟ್ಟಿಗದ್ದೆ ವಂದಿಸಿದರು.

ಸಾಂಸ್ಕೃತಿಕ ಸಂಭ್ರಮದಲ್ಲಿ ಡ್ಯಾನ್ಸ್ ಮತ್ತು ಬೀಟ್ಸ್ ಮತ್ತು ಸಂಸ್ಥೆ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ, ಲಕುಮಿ ತಂಡದ ಕುಸಾಲ್ದ ಕಲಾವಿದರ್ ಅಭಿನಯಿಸುವ ಅರವಿಂದ್ ಬೋಳಾರ್ ಅಭಿನಯದ ತುಳು ಹಾಸ್ಯಮಯ ನಾಟಕ ಒರಿಯಾಂಡಲಾ ಸರಿಬೋಡು ಪ್ರದರ್ಶನ ಗೊಂಡಿತು.