ಸರಕಾರಿ ನೇಮಕಾತಿಗಳಲ್ಲಿ ಹಂತ ಹಂತವಾದ ಯಶಸ್ಸು ಉನ್ನತ ಸ್ಥಾನಕ್ಕೇರಿಸುತ್ತದೆ ಎಂಬುದನ್ನು ಸಾಬೀತುಪಡಿಸಿದ ವಿ. ಅಕಾಡೆಮಿಯ ವಿದ್ಯಾರ್ಥಿ
ವಿದ್ಯಾಮಾತಾ ಅಕಾಡೆಮಿಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಗೆ ಪೂರ್ವ ತಯಾರಿ ತರಬೇತಿಯನ್ನು ಪಡೆದ ಬಸವರಾಜ್ ರವರು ಕರ್ನಾಟಕ ರಾಜ್ಯ ಪೊಲೀಸ್ ನ ಸಬ್ ಇನ್ಸ್ಪೆಕ್ಟರ್ 545 ಹುದ್ದೆಯ ನೇಮಕಾತಿ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾಗಿ ನೇಮಕಾತಿಗೊಂಡಿರುತ್ತಾರೆ.
ಮೂಲತಃ ಬೆಳಗಾವಿ ಜಿಲ್ಲೆಯ ಕಾಗವಡ ತಾಲೂಕಿನ ಕಾತ್ರಾಳ್ ಗ್ರಾಮದ ನಿವಾಸಿಗಳಾದ ಶಂಕರ ಮತ್ತು ಯಮುನವ್ವ ದಂಪತಿಗಳ ಪುತ್ರ ಬಸವರಾಜ ಮುದವಿ ರವರು ಪ್ರಸ್ತುತ ಸುಳ್ಯ ಆರಕ್ಷಕ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮುದವಿಯವರು ಈ ಹಿಂದೆ ಬೆಳ್ಳಾರೆ ಆರಕ್ಷಕ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದುಕೊಂಡು ಉನ್ನತ ಸ್ಥಾನಕ್ಕೇರಲು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಕರ್ತವ್ಯದ ಒತ್ತಡದ ನಡುವೆಯೂ ಅಭ್ಯಾಸ ನಡೆಸಿ ಕಡೆಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆಗೊಂಡು ವಿದ್ಯಾಮಾತಾ ಅಕಾಡೆಮಿಯ ಕೀರ್ತಿಯನ್ನು ಉನ್ನತ ಸ್ಥಾನಕ್ಕೆರಿಸಿದ್ದಾರೆ, ಬಸವರಾಜ ಮುದವಿಯವರ ಈ ಸಾಧನೆಗೆ ಪ್ರಸ್ತುತ ಪುತ್ತೂರು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿರುವ ಆಂಜನೇಯ ರೆಡ್ಡಿಯವರ ಮಾರ್ಗದರ್ಶನ ಸ್ಮರಣಿಯವಾಗಿದ್ದು, ಹೆತ್ತವರಿಗೂ ಊರಿಗೂ ಇವರ ಅವಿಸ್ಮರಣೀಯವಾದ ಯಶಸ್ಸು ಗೌರವವನ್ನು ತಂದಿದ್ದು ಇನ್ನಷ್ಟು ಆಕಾಂಕ್ಷಿಗಳಿಗೆ ದಾರಿದೀಪವಾಗಿರುವ ವಿದ್ಯಾಮಾತಾ ಅಕಾಡೆಮಿಯ ಮುಂದಿನ ತರಬೇತಿಗಳಿಗೆ ಇನ್ನಷ್ಟು ಬಲ ಬಂದಿದೆ.