ಬೆಳ್ಳಾರೆ ಪೇಟೆಯಲ್ಲಿ ಸಾರ್ವಜನಿಕವಾಗಿ ಆಡುಗಳನ್ನು ಬಿಟ್ಟ ಮಾಲಕರು

0

ಬೆಳ್ಳಾರೆ ಗ್ರಾಮ ಪಂಚಾಯತ್ ನಿಂದ ಸಾರ್ವಜನಿಕವಾಗಿ ಪೇಟೆಯಲ್ಲಿ ಸಾಕು ಆಡುಗಳನ್ನು ಬಿಡಬಾರದಾಗಿ ಮಾಲಕರಿಗೆ ಎಚ್ಚರಿಕೆ ನೀಡಲಾಗಿತ್ತು, ಆದರೆ ಇದರ ಕುರಿತು ಕ್ರಮ ಕೈಗೊಳ್ಳದೆ ಪೇಟೆಗೆ ಆಡುಗಳನ್ನು ಬಿಡುತ್ತಿರುವುದು ದೂರುಗಳು ಬಂದಿರುವುದರಿಂದ,ಇಂದಿನಿಂದ ಆಡುಗಳನ್ನು ಗ್ರಾಮ ಪಂಚಾಯತ್ ನಿಂದ ಕಟ್ಟಿ ಹಾಕಿ ಮಾಲಕರಿಗೆ ದಂಡ ವಿಧಿಸುವ ಕ್ರಮ ಕೈಗೊಳ್ಳಲಾಗಿದೆ.

ಮುಂದೆ ಸಾಕು ಪ್ರಾಣಿಗಳ ಮಾಲಕರು ಕ್ರಮ ಕೈಗೊಳ್ಳದೆ ಇದ್ದಲ್ಲಿ ಹೆಚ್ಚಿನ ಮೊತ್ತದ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದೆಂದು ಗ್ರಾಮ ಪಂಚಾಯತ್ ನಿಂದ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.