ಜಯನಗರ ಆಟೋ ಚಾಲಕ ಮಜೀದ್ ಕುತ್ತಮೊಟ್ಟೆಯವರು ಜಯನಗರದ ರಸ್ತೆಯಲ್ಲಿ ನಿರ್ಮಾಣವಾಗಿರುವ ಹೊಂಡ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚುವ ಮೂಲಕ ಶ್ರಮದಾನ ನಡೆಸಿದ್ದಾರೆ.
ಹಳೆಗೇಟಿನಿಂದ ಜಯನಗರ ಸಂಪರ್ಕ ಮಾಡುವ ಈ ರಸ್ತೆ ಹೊಸಗದ್ದೆ ಬಳಿಯಿಂದ ಜಯನಗರ ಶಾಲೆವರೆಗೂ ಅಲ್ಲಲ್ಲಿ ಗುಂಡಿ ಬಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನು ಅರಿತ ಆಟೋ ಚಾಲಕ ಮಜೀದ್ ತಾವೇ ತಮ್ಮ ಆಟೋದಲ್ಲಿ ಕೆಂಪು ಕಲ್ಲು ಹುಡಿ ಮತ್ತು ಮಣ್ಣನ್ನು ತಂದು ಈ ಭಾಗದ ಬಹುತೇಕ ಗುಂಡಿಗಳನ್ನು ಮುಚ್ಚುವ ಶ್ರಮದಾನ ಕಾರ್ಯ ಮಾಡಿದ್ದಾರೆ.