2025 ರ ಫೆಬ್ರವರಿ 26 ರಂದು ಅಕ್ಷರಕೋಟಿ ಜಪಯಜ್ಞ
2025 ರ ನವೆಂಬರ್ 07 ರಿಂದ 17 ರ ವರೆಗೆ ಅತಿರುದ್ರ ಮಹಾಯಾಗ ಕಾರ್ಯಕ್ರಮ
ಲೋಕ ಕಲ್ಯಾಣಾರ್ಥ ಬಹು ದೊಡ್ಡ ಕಾರ್ಯಕ್ರಮಗಳು ಶ್ರೀ ಬಸವೇಶ್ವರ ಟ್ರಸ್ಟ್ ನಿಂದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ
ಸುಬ್ರಹ್ಮಣ್ಯದ ಕುಲ್ಕುಂದ ಬಸವನಮೂಲ ಬಸವೇಶ್ವರ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಬಹು ದೊಡ್ಡ ಕಾರ್ಯಕ್ರಮಗಳು ನಡೆಯಲಿದ್ದು ಅತಿ ವಿರಳವಾಗಿ ನಡೆಯುವ ಬಹುದೊಡ್ಡ ಕಾರ್ಯಕ್ರಮ “ಅತಿರುದ್ರ ಮಹಾಯಾಗ” ಮುಂದಿನ ವರ್ಷ 2025 ರ ನವೆಂಬರ್ ನಲ್ಲಿ ನಡೆಯಲಿದೆ ಎಂದು ಬಸವೇಶ್ವರ ದೇವಾಲಯ ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಮಾಹಿತಿ ನೀಡಿದೆ.
ಈ ಅತಿರುದ್ರ ಮಹಾಯಾಗ ಕಾರ್ಯಕ್ರಮ ನಮ್ಮ ಭಾಗದಲ್ಲಿ ನಡೆಯಲಿರುವ ಅತಿ ದೊಡ್ಡ ಧಾರ್ಮಿಕ, ಲೋಕಕಲ್ಯಾರ್ಥ ಕಾರ್ಯಕ್ರಮ ವಾಗಿದ್ದು ಅಂದಾಜಿ ಮೂರು ಕೋಟಿಯಷ್ಟು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಅದರ ಪೂರ್ವ ಭಾವಿಯಾಗಿ ಈಗಾಗಲೇ ವರ್ಷ ಪ್ರತಿ ನಡೆಯುವ ಕಾರ್ತಿಕ ದಿಪೋತ್ಸವ ನ.2 ರಿಂದ ಡಿ.1 ರ ವರಗೆ ನಡೆಯಲಿದ್ದು ನ. 25 ರಂದು ಶ್ರೀ ಮಹಾರುದ್ರ ಯಾಗ ನಡೆಯಲಿದೆ. ಮುಂದಿನ ವರ್ಷ ಪೆಬ್ರವರಿಯ ಮಹಾ ಶಿರಾತ್ರಿಯಂದು “ಅಕ್ಷರಕೋಟಿ ಜಪಯಜ್ಞ” ನಡೆಯಲಿದ್ದು
2025 ರ ನವೆಂಬರ್ 7 ರಿಂದ ನ.17 ರ ವರೆಗೆ “ಅತಿ ರುದ್ರಮಾಯಾಗ ” ನಡೆಯಲಿದೆ ಎಂದು ಗಿರಿಧರ ಸ್ಕಂದ ಮಾಹಿತಿ ನೀಡಿದರು.
2025 ರ ಫೆಬ್ರುವರಿ 26 ರಂದು “ಅಕ್ಷರಕೋಟಿ ಜಪಯಜ್ಞ” ನಡೆಯಲಿದ್ದು ಅದಕ್ಕೆ ಸಂಬಂಧಿಸಿದ ಸೇವಾರ್ಥಿಗಳಿಗೆ ರುದ್ರಾಕ್ಷಿ ಜಪಿಸಿ, ಸಂಕಲ್ಪ ನೆರವೇರಿಸಿ ಕಳುಹಿಸಲಾಗುತ್ತಿದ್ದು ಆನ್ಲೈನ್ ವೀಕ್ಷಣೆಗೂ ವ್ಯವಸ್ಥೆ ಮಾಡಲಾಗಿದೆ .
2025 ರ ನವೆಂಬರ್ 07 ರಿಂದ 17 ರ ವರೆಗೆ ಅತಿರುದ್ರ ಮಹಾಯಾಗ ಕಾರ್ಯಕ್ರಮ ಜರುಗಲಿದ್ದು ಸೇವಾರ್ಥಿಗಳು ₹353 ಪಾವತಿಸಿ ನೊಂದಾವಣೆ ಮಾಡುತಿದ್ದು ನೋಂದಣಿ ಕಾರ್ಯ ಪ್ರಗತಿಯಲ್ಲಿದೆ ಎಂದು ದೇವಾಲಯದ ಪ್ತಧಾನ ಅರ್ಚಕ ಗಣೇಶ್ ದೀಕ್ಷಿತ್ ಮಾಹಿತಿ ನೀಡಿದರು.
ಟ್ರಸ್ಟ್ ಇನ್ನೋರ್ವ ಸದಸ್ಯ ಮನೋಹರ ನಾಳ ಮಾತನಾಡಿ ಈ ಭಾಗದಲ್ಲಿ ಇದು ಮೊದಲ ಭಾರಿ ಆಗುತಿದ್ದು ನಮ್ಮೂರಿನವರಿಗೆ ಇದರಲ್ಲಿ ಭಾಗವಹಿಸಲು ಸುವರ್ಣ ಅವಕಾಶ. ದೇವಾಲಯ ಬೆಳವಣಿಗೆಗೂ ಇದು ಪೂರಕವಾಗಲಿದ್ದು ಎಲ್ಲರೂ ಕೈ ಜೋಡಿಸಬೇಕು ಎಂದು ಕೇಳಿಕೊಂಡರು.
ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್ ನ ಸದಸ್ಯರುಗಳಾದ ಶಿವರಾಮ ಪಳ್ಳಿಗದ್ದೆ, ವಿಜಯಕುಮಾರ್ ನಡುತೋಟ. ಚಂದ್ರಶೇಖರ ಬಸವನಮೂಲೆ ಮತ್ತಿತರರು ಉಪಸ್ಥಿತರಿದ್ದರು.