ಸುಳ್ಯ ಎನ್ ಎಂ ಸಿ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳಿಗೆ ಸುಳ್ಯ ಪೊಲೀಸ್ ಠಾಣಾ ಅಧಿಕಾರಿಗಳು ಸಂಚಾರ ನಿಯಂತ್ರಣ ಬಗ್ಗೆ ತರಬೇತಿ ನೀಡುವ ಕಾರ್ಯಕ್ರಮ ಅ.30 ರಂದು ನಡೆಯಿತು.
ತರಬೇತಿ ಪಡೆಯಲು ಠಾಣೆಗೆ ಬಂದಿದ್ದ ವಿದ್ಯಾರ್ಥಿಗಳನ್ನು ಸುಳ್ಯ ಠಾಣಾ ಉಪನಿರೀಕ್ಷ ಸಂತೋಷ್ ಬಿ.ಪಿ ರವರ ಮಾರ್ಗದರ್ಶನದಲ್ಲಿ ಎ.ಎಸ್. ಐ ಉದಯಭಟ್ ರವರು ನಗರದ ಮುಖ್ಯ ರಸ್ತೆಯಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ದು ಸಂಚಾರ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ನಗರದ ವೃತ್ತಗಳಲ್ಲಿ ವಾಹನಗಳನ್ನು ನಿಯಂತ್ರಣ ಮಾಡುವ ಬಗ್ಗೆ, ವಾಹನಗಳ ವೇಗದ ಮಿತಿಯ ಬಗ್ಗೆ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿದಾಗ ಉಂಟಾಗುವ ಪ್ರಯೋಜನದ ಬಗ್ಗೆ,ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಿ ಚಾಲನೆ ನಡೆಸು ಬಗ್ಗೆ, ಇತರ ಸಂಚಾರ ನಿಯಮಗಳ ಕುರಿತು ಮಾಹಿತಿಗಳನ್ನು ನೀಡಿದರು.
ಪೊಲೀಸ್ ಸಿಬ್ಬಂದಿ ಸತೀಶ್ ಸಹಕಾರ ನೀಡಿದರು.