ಕೊಡಗು ಸಂಪಾಜೆ ಗೇಟಿನ ಬಳಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಸಂಪಾಜೆ, ಸಂಪಾಜೆ ಹಿರಿಯ ಪ್ರಾಥಮಿಕ ಶಾಲೆ, ಲಯನ್ಸ್ ಕ್ಲಬ್ ಸಂಪಾಜೆ, ನೇತಾಜಿ ಗೆಳೆಯರ ಬಳಗ ಚಡಾವು, ಶ್ರೀ ಭಗವಾನ್ ಸಂಘ, ಪಯಸ್ವಿನಿ ಯುವಕ ಸಂಘ, ರಿಕ್ಷಾ ಮಾಲಕ – ಚಾಲಕರ ಸಂಘ, ಇವುಗಳ ಪಾಲ್ಗೊಳ್ಳುವಿಕೆಯಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.
ಬೆಳಿಗ್ಗೆ ಕನ್ನಡ ಕನ್ನಡ ಧ್ವಜಾರೋಹಣ ಕಾರ್ಯವನ್ನು ಲಯನ್ಸ್ ಕ್ಲಬ್ ಸಂಪಾಜೆ ಇದರ ಅಧ್ಯಕ್ಷ ಶ್ರೀಮತಿ ಪಾರ್ವತಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ್ ಪಿ.ಕೆ., ಪಯಸ್ವಿನಿ ಸಹಕಾರಿ ಸಂಘದ ಅಧ್ಯಕ್ಷ ಅನಂತ ಊರುಬೈಲು, ಶ್ರೀಮತಿ ಟೀನ, ಅರೆಭಾಷೆ ಅಕಾಡೆಮಿ ಸದಸ್ಯ ಲೋಕೇಶ್ ಊರುಬೈಲು ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ತದ ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಪಾಜೆ ಇದರ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಗೋಪಾಲ ಪೆರಾಜೆ ಅಧ್ಯಕ್ಷರು ಕ.ಸಾ.ಪ ಹೋಬಳಿ ಘಟಕ ಸಂಪಾಜೆ ಇವರು ವಹಿಸಿದ್ದು, ಸಭಾ ಕಾರ್ಯಕ್ರಮವನ್ನು ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ ಅವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಕುಮಾರ್ ಸಂಪಾಜೆ, ಶಿಕ್ಷಕರು ಸಂಪಾಜೆ ಹೈಸ್ಕೂಲ್ ಅವರು ಕನ್ನಡ ನಾಡು ನುಡಿಗಳ ಬಗ್ಗೆ ವಿವರಿಸಿದರು. ಶಾಲಾ ಶಿಕ್ಷಕರಾದ ಶ್ರೀ ಕುಸುಮಾಕರ ಅವರು ಕನ್ನಡ ರಾಜ್ಯೋತ್ಸವ ಕನ್ನಡ ಏಕೀಕರಣ ಇತ್ಯಾದಿಗಳ ಬಗ್ಗೆ ವಿವರಗಳನ್ನು ನೀಡಿದರು. ವೇದಿಕೆಯಲ್ಲಿ ಕ.ಸಾ.ಪ. ಮಡಿಕೇರಿ ತಾಲೂಕು ಅಧ್ಯಕ್ಷರಾದ ಶ್ರೀಮತಿ ಕಡ್ಲೇರ ತುಳಸಿ ಮೋಹನ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸಾವಿತ್ರಿ ಪಿ. ಎ. ಕೊಯನಾಡು ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವನಿತಾವಾಣಿ, ಶ್ರೀ ರಿತಿನ್ ಡೆಮ್ಮಲೆ, ಶಶಿಕುಮಾರ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಸಾರ್ವಜನಿಕರು ಭಾಗಿಯಾಗಿದ್ದು ಕಾರ್ಯಕ್ರಮವನ್ನು ಶಾಲಾ ಶಿಕ್ಷಕರಾದ ಚೇತನ ಅವರು ನಿರ್ವಹಿಸಿದ್ದರು.