ಕಾರ್ತಿಕ ಮಾಸದ ಒಂದು ತಿಂಗಳುಗಳ ಕಾಲ ನಿರಂತರವಾಗಿ ಜರುಗಲಿರುವ ದೀಪೋತ್ಸವ
ಸುಳ್ಯದ ಗ್ರಾಮ ದೇವಾಲಯವಾಗಿರುವ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ಸನ್ನಿಧಿಯಲ್ಲಿ ಕಾರ್ತಿಕ ದೀಪೋತ್ಸವವು ನ.2ರಂದು ಆರಂಭಗೊಂಡಿದ್ದು, ಕಾರ್ತಿಕ ಮಾಸದ ಪ್ರಯುಕ್ತ ಮುಂದಿನ ಒಂದು ತಿಂಗಳುಗಳ ಕಾಲ ಸಂಜೆಯ ವೇಳೆ ನಿರಂತರವಾಗಿ ದೀಪೋತ್ಸವವು ಜರುಗಲಿದೆ.
ನ.2ರಂದು ಸಂಜೆ ಕಾಯರ್ತೋಡಿಯ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಹಾಗೂ ಶ್ರೀ ಚೆನ್ನಕೇಶವ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆ ಜರುಗಿತು.
ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕ ನೀಲಕಂಠ ಎಂ.ಪಿ., ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪ ತಹಶಿಲ್ದಾರ್ ಚಂದ್ರಕಾಂತ್ ಎಂ.ಆರ್., ಕಾರ್ತಿಕ ದೀಪೋತ್ಸವ ಸಮಿತಿ ಸಂಚಾಲಕ ಚಂದ್ರಶೇಖರ ಅಡ್ಪಂಗಾಯ, ಸೇವಾ ಸಮಿತಿ ಸಂಚಾಲಕ ನವೀನ್ ಕುದ್ಪಾಜೆ ಸೇರಿದಂತೆ ಕಾರ್ತಿಕ ದೀಪೋತ್ಸವ ಸಮಿತಿಯ ಪದಾಧಿಕಾರಿಗಳು, ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ನ.2ರಂದು ಕಾರ್ತಿಕ ದೀಪೋತ್ಸವವು ಆರಂಭಗೊಂಡಿದ್ದು, ಡಿ.1ರವರೆಗೆ ನಿರಂತರವಾಗಿ ಸಂಜೆ ಕಾರ್ತಿಕ ದೀಪೋತ್ಸವದ ವೇಳೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆಯು ನಡೆಯಲಿದೆ.