ಕೊಲ್ಲಮೊಗ್ರು ಗ್ರಾಮ ಕಾಂಗ್ರೆಸ್ ಸಮಿತಿಯಿಂದ ಸಹಾಯ ನ.3 ರಂದು ಎರಡು ಮನೆಯವರಿಗೆ ಸಹಾಯ ಹಸ್ತ ನೀಡಲಾಯಿತು.
ಅಕಾಲಿಕವಾಗಿ ಮರಣವನ್ನಪ್ಪಿದ ದಿl ಈಶ್ವರ ಗೌಡ ದೋಣಿಪಳ್ಳರವರ ಕುಟುಂಬದ ಸದಸ್ಯರಿಗೆ ₹ 5000 ಮತ್ತು ಬೈಕ್ ಅಪಘಾತದಲ್ಲಿ ಗಾಯಗೊಂಡ ಐತ ಕೊರಗ ಅವರ ಮೊಮ್ಮಗ ಪುನೀತ್ ಕುಮಾರ್ ಬೆಂಡೋಡಿ ಅವರಿಗೆ ₹ 5000 ವನ್ನು ಸಹಾಯಧನವಾಗಿ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಣಿಕಂಠ ಕೊಳಗೆ, ಕಾರ್ಯದರ್ಶಿ ದಿನೇಶ್ ಕುಮಾರ್ ಮಡ್ತಿಲ, ಬೂತ್ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬೊಳಿಯಾನಮನೆ, ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರಾದ ಮೋನಪ್ಪ ನಾಯ್ಕ ಕೊಳಗೆ, ಜೋಷಿ ಬೆಂಡೋಡಿ, ಜಯರಾಮ ಬೆಂಡೋಡಿ, ಕಮಲಾಕ್ಷ ಬೆಂಡೋಡಿ ಮತ್ತಿತರರು ಉಪಸ್ಥಿತರಿದ್ದರು.