9 ರಿಂದ 12ನೇ ತರಗತಿಯಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಜೇಸಿಐ ವತಿಯಿಂದ ನೀಡುವ ವಿದ್ಯಾರ್ಥಿ ವೇತನಕ್ಕೆ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ನಾಲ್ಕು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳನ್ನು ಬೆಳ್ಳಾರೆ ಜೇಸಿಐ ಘಟಕದ ವತಿಯಿಂದ ಕೆಪಿಎಸ್ ನಲ್ಲಿ ನಡೆದ ಪೋಷಕರ ಸಭೆಯಲ್ಲಿ ಅಭಿನಂದಿಸಲಾಯಿತು.
ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ, ಸದಸ್ಯ ಉಮೇಶ್ ಮಣಿಕ್ಕಾರ ಶಾಲೆಗೆ ಭೇಟಿ ನೀಡಿ ಅಭಿನಂದಿಸಿದರು. ವಿದ್ಯಾರ್ಥಿ ವೇತನ ಸಿಗುವಲ್ಲಿ ಸಹಕರಿಸಿದ ಬೆಳ್ಳಾರೆ ಜೇಸಿಐ ಘಟಕಕ್ಕೆ ವಿದ್ಯಾರ್ಥಿಗಳಾದ ಹೆನ್ಯಶ್ರೀ, ರಶ್ಮಿತಾ, ಅಶ್ವಿತಾ, ಅರ್ಪಿತಾ ಧನ್ಯವಾದ ಸಲ್ಲಿಸಿದರು. ಉಪಪ್ರಾoಶುಪಾಲರಾದ ಉಮಾಕುಮಾರಿ ಸೇರಿದಂತೆ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.