ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ಇದರ ತಾಲೂಕು ಸಮಿತಿ ಸಭೆ ನ.4 ರಂದು ಸಿ .ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ದ.ಕ. ಜಿಲ್ಲಾ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ ಉಪಸ್ಥಿತರಿದ್ದರು.
ಸಭೆಯಲ್ಲಿ ನೂತನ ತಾಲೂಕು ಸಮಿತಿ ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಮಧುಸೂಧನ ಸುಳ್ಯ, ಉಪಾಧ್ಯಕ್ಷರಾಗಿ ಲವ ದುಗಲಡ್ಕ , ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ತೋಟಪ್ಪಾಡಿ ಮಂಡೆಕೋಲು, ಕೋಶಾಧಿಕಾರಿಯಾಗಿ ವಿಜಯಕುಮಾರ್ ಚಾರ್ಮತ ನಡುಗಲ್ಲು , ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ ಸುಳ್ಯ, ಜೊತೆ ಕಾರ್ಯದರ್ಶಿಗಳಾಗಿ ಶಿವಾನಂದ ಪಾಟೀಲ್ ಹಾಗೂ ವಿಶುಕುಮಾರ್ ಜಟ್ಟಿಪಳ್ಳ ಆಯ್ಕೆಯಾದರು.
ಸಮಿತಿ ಸದಸ್ಯರುಗಳಾಗಿ ಮಣಿ ಗೂನಡ್ಕ, ಸಂದೀಪ್ ಉಬರಡ್ಕ, ದಿನೇಶ್ ಮರ್ಕಂಜ, ಶಿಜು ಸುಳ್ಯ ನಗರ, ಗೌತಮ್ ಉಬರಡ್ಕ, ರಾಘವ ಕುಕ್ಕುಜಡ್ಕ, ಗಣೇಶ್ ಸುಳ್ಯ ನಗರ, ವೇಣುಗೋಪಾಲ ತುಂಬೆತ್ತಡ್ಕ ಎಲಿಮಲೆ, ಪ್ರವೀಣ್ ದೋಣಿಪಳ್ಳ ಕೊಲ್ಲಮೊಗ್ರು, ಜನಾರ್ದನ ಮಂಡೆಕೋಲು, ನಾರಾಯಣ ಸುಳ್ಯ ಇವರುಗಳು ಆಯ್ಕೆಯಾದರು.