ಕೇಂದ್ರ ಸರಕಾರದ ಬಹುನಿರಿಕ್ಷೀತ ಮಹಾತ್ವಕಾಂಕ್ಷೀ ಯೋಜನೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾಮಗಾರಿ ನಡೆಯತ್ತಿದ್ದು ಇದರ ಆಳಿಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ನ.6ರಂದು ಬಂಟ್ವಾಳ ತಾಲೂಕಿನ ನರಿಕೊಂಬುವಿನಲ್ಲಿ ವೀಕ್ಷಿಸಿ, ಮಾಹಿತಿ ಪಡೆದುಕೊಂಡರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸಂಪೂರ್ಣ ವಿವರವನ್ನು ಮತ್ತು ಸುಳ್ಯ ತಾಲೂಕಿನ ಯೋಜನೆಯ ಕುರಿತು ವರದಿಗಳನ್ನು ಪಡೆದುಕೊಂಡರು.
ಜೊತೆಗೆ ಪಾಣೆಮಂಗಳೂರಿನಲ್ಲಿ ಕಾರ್ಯಚರಿಸುತ್ತಿರುವ ಪ್ಲ್ಯಾಂಟ್ ವೀಕ್ಷಣೆ, ನರಿಕೊಂಬುವಿನಲ್ಲಿ ಕಾರ್ಯಚರಿಸುತ್ತಿರುವ ಟ್ರಿಟ್ ಮೆಂಟ್ ಪ್ಲ್ಯಾಂಟ್, ಶಂಬೂರಿನಲ್ಲಿ ಜ್ಯಾಕ್ ವೆಲ್ ನಿರ್ಮಾಣ ಹಂತದ ಕಾಮಗಾರಿಯನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್,ಎನ್, ಮನ್ಮಥ, ಐವರ್ನಾಡು ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಬಿಜೆಪಿ ಪ್ರಮುಖರಾದ ಶೀನಾಥ್ ಬಾಳಿಲ, ಪದ್ಮನಾಭ ಬೂಡು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಾದ ಬಂಟ್ವಾಳ ಉಪವಿಭಾಗ ಇ.ಇ. ನಟೇಶ, ಎ.ಇ. ಗಳಾದ ಜಗದೀಶ , ನಾಸಿರ್, ಸುಳ್ಯ ಉಪವಿಭಾಗ ಎ.ಇ.ಇ. ಚೈತ್ರ, ಎ.ಇ. ಮಣಿಕಂಠ ಎ.ಇ. ಜನಾರ್ದನ, ಗುತ್ತಿಗೆದಾರರಾದ ಶಂಕರನಾರಾಯಣ, ಕಂಪನಿಯ ಪ್ರಾಜೆಕ್ಟ್ ಮ್ಯಾನೆಜರ್ ಶ್ರೀನಿವಾಸ ಕುಲಕರ್ಣಿ ಉಪಸ್ಥಿತರಿದ್ದರು.