ಸರಕಾರಿ‌ ನೌಕರರ ಸಂಘ ಸುಳ್ಯ ತಾಲೂಕು ಅಧ್ಯಕ್ಷರಾಗಿ ಡಾ.ನಿತಿನ್ ಪ್ರಭು ಅವಿರೋಧ ಆಯ್ಕೆ

0

ಕೋಶಾಧಿಕಾರಿಯಾಗಿ ಶಿಕ್ಷಕ ಕುಶಾಲಪ್ಪ ತುಂಬತ್ತಾಜೆ ಆಯ್ಕೆ

ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಮಂಜು – ಶಿವಪ್ರಸಾದ್ ನಡುವೆ ಸ್ಪರ್ಧೆ

ಕರ್ನಾಟಕ ರಾಜ್ಯ ಸರಕಾರಿ‌ ನೌಕರರ ಸಂಘ ಸುಳ್ಯ ತಾಲೂಕು ಇದರ ನೂತನ ಅಧ್ಯಕ್ಷರಾಗಿ ಸುಳ್ಯ ಪಶುಸಂಗೋಪನೆ ಇಲಾಖೆಯ‌ ಮುಖ್ಯ ವೈದ್ಯಾಧಿಕಾರಿ ಡಾ.ನಿತೀನ್ ಪ್ರಭು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕೋಶಾಧಿಕಾರಿಯಾಗಿ ಗುತ್ತಿಗಾರು ಶಾಲಾ ಸಹ ಶಿಕ್ಷಕ ಕುಶಾಲಪ್ಪ ತುಂಬತ್ತಾಜೆ ಅವಿರೋಧವಾಗಿ ಆಯ್ಕೆಯಾದರು. ಆದರೆ ಅವಿರೋಧ ಆಯ್ಕೆಯ ಘೋಷಣೆ ನ.16ರಂದು ನಡೆಯಲಿದೆ.

ಆದರೆ ರಾಜ್ಯ ಪರಿಷತ್ 1 ಸದಸ್ಯ ಸ್ಥಾನಕ್ಕೆ ಸುಳ್ಯ ನ್ಯಾಯಾಲಯದ ಸಿಬ್ಬಂದಿ ಮಂಜು ಹಾಗೂ ಸುಳ್ಯ ಬಿ.ಇ.ಒ. ಕಚೇರಿ ಸಿಬ್ಬಂದಿ ಶಿವಪ್ರಸಾದ್ ಕೆ.ವಿ. ನಾಮಪತ್ರ ಸಲ್ಲಿಸಿರುವುದರಿಂದ ಆ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಸರಕಾರಿ ನೌಕರರ ಸಂಘದ ಅಧ್ಯಕ್ಷ, ಕೋಶಾಧಿಕಾರಿ ಹಾಗೂ ರಾಜ್ಯಪರಿಷತ್ ಸದಸ್ಯ ಸ್ಥಾನಕ್ಕೆ ಮಾತ್ರ ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಅದರಂತೆ ಅಧ್ಯಕ್ಷ ಮತ್ತು ಕೋಶಾಧಿಕಾರಿ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದವು.

ನಾಮಪತ್ರ ಸಲ್ಲಿಕೆಗೆ ಅವಕಾಶ ನ.7ರಂದು ಕೊನೆ ಗೊಂಡಿದೆ. ನ.16ರಂದು ಚುನಾವಣೆ ನಡೆಯಲಿದೆ. ಅಧ್ಯಕ್ಷ, ಕೋಶಾಧಿಕಾರಿ ಸ್ಥಾನ ಅವಿರೋಧ ಆಯ್ಕೆ ಆಗಿರುವುದರಿಂದ ರಾಜ್ಯ ಪರಿಷತ್ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ.