JCI ಪುತ್ತೂರಿನ ಅಧ್ಯಕ್ಷರಾಗಿ ಭಾಗ್ಯೇಶ್ ರೈ ಆಯ್ಕೆ

0

ಜೇಸಿಐ ಪುತ್ತೂರು ಘಟಕದ 2025 ನೇ ಸಾಲಿನ ಅಧ್ಯಕ್ಷರಾಗಿ ವಿದ್ಯಾಮಾತಾ ಅಕಾಡೆಮಿ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಚುನಾಯಿತರಾಗಿರುತ್ತಾರೆ. ಜೇಸಿಐ ಮುಳಿಯ ಹಾಲ್ ನಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ನಿಯೋಜಿತ ವಲಯ ಉಪಾಧ್ಯಕ್ಷ ಚುನಾವಣಾ ಅಧಿಕಾರಿ JC ಸುಹಾಸ್ ಮರಿಕೆ, ರಾಷ್ಟ್ರೀಯ ಸಂಯೋಜಕಿ JC ಸ್ವಾತಿ ಜೆ ರೈ , ಪೂರ್ವ ಅಧ್ಯಕ್ಷರಾದ JC ಶಶಿರಾಜ್ ರೈ, 2024 ರ ಸಾಲಿನ ಅಧ್ಯಕ್ಷ JC ಮೋಹನ್ ಕೆ ರವರುಗಳು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.


ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ JC ಮುರಳಿ ಶ್ಯಾಮ್, JC ವಿಶ್ವ ಪ್ರಸಾದ್ ಸೇಡಿಯಾಪು, JC ಜಗನ್ನಾಥ್ ರೈ ,JC ಶರತ್ ಕುಮಾರ್ ರೈ , JC ವಸಂತ್ ಜಾಲಾಡಿ , JC ಗೌತಮ್ ರೈ, JC ಮನೋಹರ್ ಕೆ, 2024 ರ ಕಾರ್ಯದರ್ಶಿ JC ಆಶಾ ಮುತ್ಲಾಜೆ ಹಾಗೂ JC ಸದಸ್ಯರೆಲ್ಲರೂ ಉಪಸಿತರಿದ್ದರು.


2025ರ ಸಾಲಿಗೆ ಅಧ್ಯಕ್ಷರಾಗಿ ನಿಯೋಜನೆಗೊಂಡ ಭಾಗ್ಯೇಶ್ ರೈರವರು ತನ್ನನ್ನು ಆಯ್ಕೆ ಮಾಡಿದ 2024ರ ಆಡಳಿತ ಮಂಡಳಿ, ಚುನಾವಣಾ ಅಧಿಕಾರಿಗಳಿಗೆ ಪೂರ್ವ ಅಧ್ಯಕ್ಷರಿಗೆ,JC ಯ ಸದಸ್ಯರೆಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.