ಸಂಸದ ಸಸಿಕಾಂತ್ ಸೆಂಥಿಲ್ ರವರಿಂದ ದೀಪ ಬೆಳಗಿಸಿ ಸಮಾವೇಶದ ಉದ್ಘಾಟನೆ ; ಶಾಸಕರಾದ ಕು.ಭಾಗೀರಥಿ ಮುರುಳ್ಯ, ಅಶೋಕ್ ಕುಮಾರ್ ರೈ, ಮಾಜಿ ಸಚಿವ ಬಿ. ರಾಮನಾಥ್ ರೈ ಭಾಗಿ
ತಮಿಳು ಬಾಂಧವ ಸುವರ್ಣ ಮಹೋತ್ಸವದ ಅದ್ದೂರಿ ಚಾಲನೆಗೆ ಮಾಜಿ ಐ ಎ ಎಸ್ ಅಧಿಕಾರಿ, ಸಂಸದ ಸಸಿಕಾಂತ್ ಸೆಂಥಿಲ್ ದೀಪ ಬೆಳಗಿಸಿ ಚಾಲನೆ ನೀಡಿದರು. ಮಹೋತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ ರಮನಾಥ್ ರೈ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ರೆಪ್ಕೋ ಬ್ಯಾಂಕ್ ಚೇರ್ ಮೆನ್ ಇ ಸಂದಾನಂ,ರೆಪ್ಕೋ ಹೋಮ್ ಫೈನಾನ್ಸ್ ಚೇರ್ಮನ್ ತಂಗರಾಜ್, ಕೆ ಎಫ್ ಡಿ ಸಿ ರಾಜ್ಯ ಎಂ ಡಿ ಮಹೇಶ್ ಶಿರೂರ್, ಎಸ್ ಸಿ ಡಿ ಸಿ ಸಿ ನಿರ್ದೇಶಕ ಎಸ್ ಎನ್ ಮನ್ಮಥ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್, ಸುಳ್ಯ ಬಿ ಜೆ ಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಬಿ ಜೆ ಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಸುಳ್ಯ ನ. ಪಂ ಸದಸ್ಯ ಎಂ ವೆಂಕಪ್ಪ ಗೌಡ, ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶೆ ವನಿತಾ ದೇವಿ ಸೋಮಶೇಖರ್, ಮೊದಲಾದವರು ಭಾಗವಹಿಸಿದ್ದರು.
ಸಾವಿರಾರು ಮಂದಿ ತಮಿಳು ಬಾಂಧವರು ಸಮಾವೇಶದಲ್ಲಿ ಭಾಗವಹಿಸಿದ್ದರು.