ಚೆಯ್ಯಂಡಾಣೆಯಲ್ಲಿ ‘ಅರೆ ಭಾಷೆ’ ಗಡಿನಾಡ ಉತ್ಸವ’ಕ್ಕೆ ಚಾಲನೆ

0

ಮ್ಯಾರಥಾನ್ ಓಟದಲ್ಲಿ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ಭಾಗಿ

ಚೆಯ್ಯಂಡಾಣೆ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗಿನ ಚೆಯ್ಯಂಡಾಣೆ ಗ್ರಾಮದ ನರಿಯಂದಡ ಅಯ್ಯಪ್ಪ ಯುವಕ ಸಂಘ ಇವರ ಸಹಕಾರದಲ್ಲಿ ‘ಅರೆಭಾಷೆ ಗಡಿನಾಡ ಉತ್ಸವ’ವು ನವೆಂಬರ್ 10 ರಂದು ಚೆಯ್ಯಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯುತಿದೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಹಾಗೂ ಮಂಞಂಡ್ರ ರೇಖಾ‌ ಉಲ್ಲಾಸ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇದಕ್ಕೂ ಮುನ್ನ ನಡೆದ ಮ್ಯಾರಥಾನ್ ಓಟಕ್ಕೆ‌
ಕಡಂಗ ಗಣಪತಿ‌ ದೇವಸ್ಥಾನದ‌ ಎದುರಲ್ಲಿ‌ ನಿವೃತ್ತ ಸೇನಾನಿ‌ ಪುದಿಯಮನೆ‌ ಕೃಷ್ಣ ಹಸಿರು‌‌ನಿಶಾನೆ‌ ತೋರುವ‌ ಮೂಲಕ‌ ಚಾಲನೆ‌ ನೀಡಿದರು. ಪುರುಷರು‌ ಮತ್ತು‌ ಮಹಿಳೆಯರು‌ ಓಟದಲ್ಲಿ ಭಾಗವಹಿಸಿದರು‌. ಪೆಮ್ಮಂಡ‌ ಕೌಶಿ ಕಾವೇರಮ್ಮ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಅಯ್ಯಪ್ಪ ಯುವಕ‌ ಸಂಘದ‌ ಅಧ್ಯಕ್ಷರಾದ‌ ಹರಿಪ್ರಸಾದ್ ಬೆಳಿಯಂಡ್ರ‌, ಉತ್ಸವದ‌ ಸದಸ್ಯ ಸಂಚಾಲಕರಾದ‌ ವಿನೋದ್‌ ಮೂಡಗದ್ದೆ, ಚಂದ್ರಾವತಿ‌ ಬಡ್ಡಡ್ಕ, ಅಕಾಡೆಮಿ‌ ಸದಸ್ಯರಾದ ಪಿ. ಎಸ್. ಕಾರ್ಯಪ್ಪ, ಲತಾಪ್ರಸಾದ್‌ ಕುದ್ಪಾಜೆ, ಅಯ್ಯಪ್ಪ ಯುವಕ‌ ಮಂಡಲದ‌ ಸದಸ್ಯರು ಹಾಗೂ‌ ಮತ್ತಿತರರು‌ ಉಪಸ್ಥಿತರಿದ್ದರು.
ಉದ್ಘಾಟನೆ ಬಳಿಕ ವಿವಿಧ ಕ್ರೀಡಾಕೂಟ ಹಾಗೂ ಸ್ಪರ್ಧೆ ಬಳಿಕ ಬೆಳಗ್ಗೆ 10 ಗಂಟೆಗೆ ನಡೆಯುತಿದೆ. ಮಧ್ಯಾಹ್ನದ ಬಳಿಕ ಸಾಂಸ್ಕೃತಿಕ ಮೆರವಣಿಗೆ, ವಿವಿಧ ಕಲಾಪ್ರಕಾರಗಳ ಪ್ರದರ್ಶನ ಜರುಗಲಿದೆ. ನಂತರ ಸಮಾರೋಪ ಸಮಾರಂಭ ನಡೆಯಲಿದೆ.