ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್(ರಿ), ಬೆಳ್ತಂಗಡಿ ಸಂಘಟನೆಯು ನ. 15ರಂದು ಗುಂಡ್ಯದಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆ ಹಾಗೂ ಬೇರೆ ಬೇರೆ ಸಂಘಟನೆಗಳ ಒಡಗೂಡಿಕೆಯಿಂದ ನಡೆಯಲಿರುವ ಕಸ್ತೂರಿರಂಗನ್ ವರದಿ ವಿರುದ್ಧ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಂಘಟನೆ ಪ್ರಕಟಿಸಿದೆ.
ಕಸ್ತೂರಿ ರಂಗನ್ ವರದಿ ಹಾಗೂ ಕೃಷಿಕರಿಗೆ ಹಾನಿ ಆಗುವ ಜ್ವಲಂತ ಸಮಸ್ಯೆಗಳಾದ ಅರಣ್ಯ ಕಂದಾಯ, ಗಡಿಗುರುತು, ಕೆಲವು ಸರ್ವೆ ನಂಬರ್ ಗಳ ಸಮಸ್ಯೆ ಇತ್ಯಾದಿ ವಿಚಾರಗಳನ್ನು ಸರಿಪಡಿಸಿ ಅನ್ನದಾತರು ನೆಮ್ಮದಿಯಿಂದ ಬದುಕಲು ಬೇಕಾಗಿ ಹೋರಾಡುವ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕೆಎಸ್ಎಂಸಿಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ ತಿಳಿಸಿದ್ದು, ವಂದನೀಯ ಫಾ. ಆದರ್ಶ್ ಜೋಸೆಫ್ ಹಾಗೂ ಕೇಂದ್ರ ಸಮಿತಿ ಸದಸ್ಯರು ಈ ಬಗ್ಗೆ ಸಭೆ ಸೇರಿ ನಮ್ಮ ಸಮಾಜದವರ ಸಂಪೂರ್ಣ ಬೆಂಬಲ ಇರಲಿದೆ ಎಂದವರು ತಿಳಿಸಿದ್ದಾರೆ.