ಸುಳ್ಯ ಬ್ಲಾಕ್ ಕಾಂಗ್ರೆಸ್ ಮುಖಂಡರು ಸುಳ್ಯ ತಹಶೀಲ್ದಾರ್ ರ ಭೇಟಿ

0

ಜನಸಾಮಾನ್ಯರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವಂತೆ ಮನವಿ

ಸುಳ್ಯ ಬ್ಲಾಕ್ ಕಾಂಗ್ರೆಸ್ ಮುಖಂಡರು ನ. 11 ರಂದು ತಾಲೂಕು ಕಚೇರಿಗೆ ತೆರಳಿ ನೂತನವಾಗಿ ಬಂದಿರುವ ತಹಶೀಲ್ದಾರ್ ರವರನ್ನು ಭೇಟಿ ಮಾಡಿ ಜನಸಾಮಾನ್ಯರಿಗೆ ಕಚೇರಿಯಿಂದ ಉತ್ತಮ ಸೇವೆ ಸುಗಮವಾಗಿ ನಡೆಯಲು ಮನವಿ ಮಾಡಿಕ್ಕೊಂಡರು.

ಸಮಿತಿ ಅಧ್ಯಕ್ಷ ಪಿ.ಸಿ ಜಯರಾಮ್ ನೇತ್ರತ್ವದಲ್ಲಿ ಸುಳ್ಯ ತಹಶೀಲ್ದಾರ್ ರವರನ್ನು ಭೇಟಿ ಮಾಡಿದ ಮುಖಂಡರುಗಳು ಹಲವಾರು ಪ್ರಗತಿಪರ ವಿಚಾರಗಳನ್ನು ಚರ್ಚಿಸಿದ್ದು ಮುಖ್ಯವಾಗಿ ಅಕ್ರಮ-ಸಕ್ರಮ, 94C, 94CCಯಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ, ವಿದ್ಯಾಭ್ಯಾಸ ನಿಮಿತ್ತ ಆದಾಯ-ಜಾತಿ ದೃಢೀಕರಣ ಪ್ರಮಾಣ ಪತ್ರಗಳು ಸುಲಲಿತವಾಗಿ ದೊರಕುವಂತೆ ಮತ್ತು ಕಛೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ತಡೆಯುವಂತೆ, ಅಕ್ರಮ-ಸಕ್ರಮ ಸಮಿತಿಯ ಸಭೆಯನ್ನು ಪ್ರತೀ ತಿಂಗಳು ನಡೆಸುವಂತೆ ಮತ್ತು ಜನಸಾಮಾನ್ಯರ ಕೆಲಸಗಳನ್ನು ಸತಾಯಿಸದೇ ಶೀಘ್ರವಾಗಿ ವಿಲೇವಾರಿ ನಡೆಸುವಂತೆ ಸಿಬ್ಬಂದಿಗಳಿಗೆ ಸೂಚಿಸಲು ಕಾಂಗ್ರೆಸ್ ನಿಯೋಗದಿಂದ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎನ್ ಜಯಪ್ರಕಾಶ್ ರೈ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಕಲ್ಮಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಗೀತಾ ಕೋಲ್ಚಾರು, ಪೆರುವಾಜೆ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ರಾಜ್ ಶೆಟ್ಟಿ, ಕಿಸಾನ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸುರೇಶ್ ಅಮೈ, ಬೆಳ್ಳಾರೆ ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ರೈ ಬೆಳ್ಳಾರೆ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಕೊಯಿಕುಳಿ, ಜಿಲ್ಲಾ ಕೆ.ಡಿ.ಪಿ ಸದಸ್ಯರಾದ ಶ್ರೀಮತಿ ಸುಜಯಕೃಷ್ಣ , ಪ್ರವೀಣಾ ರೈ ಮರುವಂಜ, ಅಜ್ಜಾವರ ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ಲೀಲಾ ಮನಮೋಹನ್, ಆಲೆಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಧರ್ಮಪಾಲ ಕೊಯಿಂಗಾಜೆ, ಪಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಧರ್ಮಣ್ಣ ನಾಯ್ಕ್ ಗರೋಡಿ, ಮಹೇಶ್ ಬೆಳ್ಳಾರ್ಕರ್, ಕೇಶವ್ ಮೊರಂಗಲ್ಲು, ರವಿಕುಮಾರ್ ಕಿರಿಭಾಗ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ರಾಜು ನೆಲ್ಲಿಕುಮೇರಿ, ವಿಶ್ವನಾಥ, ಚೇತನ್ ಕಜೆಗದ್ದೆ ಮತ್ತಿತರರು ಉಪಸ್ಥಿತರಿದ್ದರು.