ಸುಳ್ಯ 56 ನೇ ವರ್ಷದ ಗಣೇಶೋತ್ಸವದ ಲೆಕ್ಕ ಪತ್ರ ಮಂಡನಾ ಸಭೆ

0

ದೇವತಾರಾಧನಾ ಸಮಿತಿ
ಅಧ್ಯಕ್ಷರಾಗಿ ದಿನೇಶ್ ಕುಮಾರ್ ಕೆ.ಸಿ ಪುನರಾಯ್ಕೆ

ಸುಳ್ಯ ಶ್ರೀ ಸಿದ್ಧಿವಿನಾಯಕ ಸೇವಾಸಮಿತಿ,ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿಯ ಆಶ್ರಯದಲ್ಲಿ ಜರುಗಿದ 56 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಲೆಕ್ಕ ಪತ್ರ ಮಂಡನಾ ಸಭೆ ಹಾಗೂ ‌ಪದಾಧಿಕಾರಿಗಳ ಆಯ್ಕೆಯ ಸಭೆಯು ದೇವತಾರಾಧನಾ ಸಮಿತಿಯ ಅಧ್ಯಕ್ಷ ‌ದಿನೇಶ್ ಕುಮಾರ್ ಕೆ.ಸಿಯವರ ಅಧ್ಯಕ್ಷತೆಯಲ್ಲಿ
ನ.11 ರಂದು ಕಲ್ಕುಡ ದೈವಸ್ಥಾನದ ವಠಾರದಲ್ಲಿ‌ ನಡೆಯಿತು.

ಈ ಸಂದರ್ಭದಲ್ಲಿ ಉತ್ಸವದ ಅಯ ವ್ಯಯ ಗಳ ಕುರಿತು ‌ಕೋಶಾಧಿಕಾರಿ ಶಿವರಾಮ ಕೇರ್ಪಳ ಲೆಕ್ಕ ಪತ್ರವನ್ನು ‌ಮಂಡಿಸಿದರು.
ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಉಮೇಶ್ ಪಿ.ಕೆ ಮುಂದಿನ ವರ್ಷದ ಗಣೇಶೋತ್ಸವದ ಆರ್ಥಿಕ ವ್ಯವಸ್ಥೆಯ ಕುರಿತು ಸಲಹೆ ನೀಡಿದರು.
ಮುಂದಿನ ಸಾಲಿನ ಅಧ್ಯಕ್ಷರನ್ನಾಗಿ ದಿನೇಶ್ ಕುಮಾರ್ ಕೆ.ಸಿ ಯವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು. ಹಿಂದಿನ‌ ಸಾಲಿನ ಎಲ್ಲಾ ಪದಾಧಿಕಾರಿಗಳನ್ನು ಮುಂದುವರಿಸುವಂತೆ ಸೂಚಿಸಿ ಅನುಮೋದಿಸಲಾಯಿತು.
ಕೋಶಾಧಿಕಾರಿ ಜಿ.ಜಿ.ನಾಯಕ್, ಕಾರ್ಯದರ್ಶಿ ಭರತ್ ಪಿಂಡಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉತ್ಸವದ ಕುರಿತು ಲೋಪ ದೋಷಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಮಿತಿಯ ನಿಕಟ ಪೂರ್ವ ಕಾರ್ಯದರ್ಶಿ
ಶಶಿಧರ ಎಂ.ಜೆ ಕೊಯಿಕುಳಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಭರತ್ ಪಿ.ಯು ವಂದಿಸಿದರು.
ಐಕ್ಯ ಮಂತ್ರದೊಂದಿಗೆ ಸಭೆಯು ಮುಕ್ತಾಯವಾಯಿತು.