ಅಲೆಕ್ಕಾಡಿಯಲ್ಲಿ ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನ ಅಭಿಯಾನದ ಅಂಗವಾಗಿ ಗೋ ಆಧಾರಿತ ಕೃಷಿ ಕಾರ್‍ಯಾಗಾರ ಗೋಗ್ರಾಸ ಸಹಿತ ಗೋಪೂಜೆ

0

ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನ ಅಭಿಯಾನದ ಅಂಗವಾಗಿ ಮಂಗಳೂರು ಮಾಂಡೋವಿ ಮೋಟಾರ್ಸ್ ಇದರ ಪ್ರಯೋಜಕತ್ವದಲ್ಲಿ ಗೋ ಆಧಾರಿತ ಕೃಷಿ ಕಾರ್‍ಯಾಗಾರ ಮತ್ತು ಗೋಗ್ರಾಸ ಸಹಿತ ಗೋಪೂಜೆ ಕಾರ್ಯಕ್ರಮವು ಅಲೆಕ್ಕಾಡಿಯ ನೀರುಡೆಲ್ ಅಕ್ಷಯ ಆಳ್ವರ ಮನೆಯಲ್ಲಿ ನ.೯ ರಂದು ನಡೆಯಿತು.


ಕಾರ್ಯಕ್ರಮದಲ್ಲಿ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಸಾವಯವ ಕೃಷಿಕ ಎ. ಪಿ. ಸದಾಶಿವ ಮರಿಕೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೋಸೇವಾ ಗತಿ ವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಪ್ರವೀಣ ಸರಳಾಯ ಆಗಮಿಸಿದ್ದರು. ಸುಳ್ಯದ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ ದೀಪ ಪ್ರಜ್ವಲನೆ ಮಾಡಿದರು. ಪ್ರಗತಿಪರ ಕೃಷಿಕರಾದ ಪಿ. ರಾಮಚಂದ್ರ ಭಟ್ ದೇವಸ್ಯ, ಮಂಗಳೂರು ಮಾಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಗ್ರಾಮೀಣ ಮಾರಾಟ ವಿಭಾಗದ ಪ್ರಬಂಧಕ ಸುರೇಶ್ ಬಿ .ಜಿ , ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಗೌಡ ಜಾಲ್ತಾರ್ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.


ಸಂವಾದ ಕಾರ್ಯಕ್ರಮದಲ್ಲಿ ಪ್ರಸನ್ನ ಭಟ್ ಕುಂಞಿಹಿತ್ತಿಲು , ಪದ್ಮನಾಭ ರೈ, ಕೃಷ್ಣಪ್ರಸಾದ್, ಗಣಪತಿ ಭಟ್, ಪ್ರಭಾಕರ್ ರೈ ಪಿ.ಬಿ , ಯತೀಂದ್ರನಾಥ ರೈ ಪಿ.ಡಿ , ರಾಕೇಶ್ ರೈ ನಳಿಯಾರು , ಮುರುಳ್ಯ ಹಾಲು ಸೊಸೈಟಿ ಅಧ್ಯಕ್ಷ ಸೀತಾರಾಮ ಗೌಡ ಎಂ.ಬಿ , ಶಮೀರ್ ಬಜಪೆ, ನಿಂತಿಕಲ್ಲು ಶ್ರೀದೇವಿ ಅಗ್ರಿಟೆಕ್ ಮಾಲಕ ತಿಮ್ಮಪ್ಪ ರೈ, ಶಿಕ್ಷಕ ಬಾಲಕೃಷ್ಣ ಪೂಜಾರಿ, ಸುಧೀಶ್ ಕುಮಾರ್, ಮೊದಲಾದವರು ಭಾಗವಹಿಸಿದ್ದರು. ಉಪ್ಪಿನಂಗಡಿಯ ಮಾಂಡೋವಿ ಮೋಟಾರ್ಸ್‌ನ ಸೀನಿಯರ್ ರಿಲೇಶನ್‌ಶಿಫ್ ಮ್ಯಾನೇಜರ್ ಶ್ರೀಹರ್ಷ ರೈ , ಸೇಲ್ಸ್ ಆಫೀಸರ್ ಚೇತನ್ ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗ, ಗಣ್ಯರು, ಸ್ಥಳೀಯರು, ಉಪಸ್ಥಿತರಿದ್ದರು.

ನೆಟ್ಟಾರಿನ ಸಿ.ವಿ ಸುಬ್ರಹ್ಮಣ್ಯ ಭಟ್ ಅವರು ಮಲೆನಾಡು ಗಿಡ್ಡ ಹೆಣ್ಣು ಕರುವನ್ನು ಹಾಗೂ ಉಪ್ಪಿನಂಗಡಿಯ ಅವನೀಶ್ ಭಟ್ ಗಂಡು ಕರುವನ್ನು ಅಭಿಯಾನದ ಸಮಿತಿಗೆ ಕೊಡುಗೆಯಾಗಿ ನೀಡಿದ್ದು ಈ ಜತೆಯನ್ನು ಸಮಿತಿಯ ಮೂಲಕ ಸಾಂತ್ಯ ರಮೇಶ್ ರೈ ರವರಿಗೆ ದಾನವಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಕ್ಷಯ ಆಳ್ವರ ಕುಟುಂಬಸ್ಥರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಅಮೃತ ಅಕ್ಷಯ ಆಳ್ವ ತಂಡ ಪ್ರಾರ್ಥಿಸಿದರು. ಅಕ್ಷಯ ಆಳ್ವರು ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಸನ್ನ ಭಟ್ ವಂದಿಸಿದರು. ನಿವೃತ್ತ ಅಧ್ಯಾಪಕ ನಾರಾಯಣ ಭಟ್ ರವರು ಕಾರ್ಯಕ್ರಮ ನಿರೂಪಿಸಿದರು.

ವರದಿ : ಸಂಕಪ್ಪ ಸಾಲಿಯನ್