ನ.18 : ಸುಳ್ಯಕ್ಕೆ ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕಾರಾಚಾರ್ಯ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಯವರ ಆಗಮನ -ಆಶೀರ್ವಚನ

0

ಪೂರ್ವ ಭಾವಿ ಸಭೆ

ಶ್ರೀ ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕಾರಾಚಾರ್ಯ ಪೂಜ್ಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಯವರು ಸುಳ್ಯ ಅರಂಬೂರಿನ ಭಾರದ್ವಾಜಾಶ್ರಮಕ್ಕೆ
ನ.18 ರಂದು ಆಗಮಿಸಲಿದ್ದಾರೆ.

ಬೆಳಗ್ಗೆ ಗಂಟೆ 11.00 ರಿಂದಸೂರ್ಯಾಸ್ತಮಾನದ ತನಕ ಕಾರ್ತಿಕ ಸೋಮವಾರದ ಪರ್ವಕಾಲದಲ್ಲಿ ಸಪರಿವಾರ ಶ್ರೀ ಚಂದ್ರಮೌಳೀಶ್ವರ ಪೂಜೆಯು ನಡೆಯಲಿರುವುದು. ಸಂಜೆ ಗಂಟೆ 7.00 ರಿಂದ ಮಹಾಸ್ವಾಮಿಗಳು ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಶ್ರೀ ಗಳಿಂದ ಆಶೀರ್ವಚನ ಕಾರ್ಯಕ್ರಮವು ನಡೆಯಲಿರುವುದು.

ಈ ಕಾರ್ಯಕ್ರಮದ ಸಿದ್ಧತೆಯ ಕುರಿತು
ನ.12 ರಂದು ಪೂರ್ವ ಭಾವಿ ಸಭೆಯು ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ
ಪದ್ಮಶ್ರೀ ಗಿರೀಶ್ ಭಾರದ್ವಾಜ್, ಡಾ.ಹರಪ್ರಸಾದ್ ತುದಿಯಡ್ಕ, ಕೃಷ್ಣ ಕಾಮತ್ ಅರಂಬೂರು, ರವಿಶಂಕರ್ ಭಾರದ್ವಾಜ್, ಕೃಪಾಶಂಕರ ತುದಿಯಡ್ಕ,
ಉಮೇಶ್ ಪಿ.ಕೆ, ಜಿ.ಜಿ.ನಾಯಕ್, ದಾಮೋದರ ಮಂಚಿ, ಶ್ರೀಮತಿ ಕಿಶೋರಿ‌ ಶೇಟ್, ಗುರುದತ್ ಶೇಟ್, ಸೋಮನಾಥ ಕೇರ್ಪಳ, ಗೋವಿಂದರಾಜ್ ಭಟ್, ಶಿವಪ್ರಸಾದ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.